ಫೆಬ್ರವರಿ 7ರ ಈ ದಿನ ಥಿಯೇಟರಿಗೆ ಲಗ್ಗೆಯಿಟ್ಟ ಕಾಲೇಜು ಹುಡ್ಗರ ತುಂಟಾದ ಸ್ಪೆಷಲ್ ಸ್ಟೋರಿ ಜಿಲ್ಕ. ಕವೀಶ್ ಶೆಟ್ಟಿ ಸ್ವತಃ ಹೀರೋ ಆಗಿ, ನಟನಾಗಿ, ನಿರ್ದೇಶಕನಾಗಿ ಜಿಲ್ಕ ಮೂಲಕ ಎಂಟ್ರಿ ಕೊಟ್ಟಿದ್ದಾರೆ. ಚಿತ್ರದ ಪಾತ್ರಕ್ಕೆ ತಕ್ಕಂತೆ ದೇಹವನ್ನು ಮೂರು ಬಾರಿ ಹೆಚ್ಚೂ ಕಡಿಮೆ ಮಾಡಿಕೊಂಡಿದ್ದಾರೆ.
ಕವೀಶ್‍ಗೆ ಜೊತೆಯಾಗಿ ಹಣ ಹೂಡಿರುವುದು ಅವರ 13 ಗೆಳೆಯರು. ಪ್ರಿಯಾ ಹೆಗ್ಡೆ, ಲಕ್ಷಾ ಶೆಟ್ಟಿ, ಗೋಪಿಕಾ ದಿನೇಶ್ ನಟಿಸಿರುವ ಚಿತ್ರ, ನ್ಯೂ ಜನರೇಷನ್ ಲವ್ ಸ್ಟೋರಿ ಇಟ್ಟುಕೊಂಡು ಬಂದಿರೋ ಸಿನಿಮಾ.