` ಹುಟ್ಟು ಹಬ್ಬದ ದಿನ ಶರಣ್ ಎಲ್ಲಿರ್ತಾರೆ ಗೊತ್ತಾ..? - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
where will sharan be on his borthday
Sharan Hruday

ಕನ್ನಡ ಚಿತ್ರರಸಿಕರ ಅಧ್ಯಕ್ಷ ಶರಣ್, ಈಗ ಅವತಾರ ಪುರುಷನಾಗುತ್ತಿದ್ದಾರೆ. ಶರಣ್‍ರನ್ನು ಅವತಾರ ಪುರುಷನನ್ನಾಗಿಸಿರುವುದು ಸಿಂಪಲ್ ಸುನಿ. ಫೆಬ್ರವರಿ 6ನೇ ತಾರೀಕು ಅವರ ಹುಟ್ಟುಹಬ್ಬ. ಆದರೆ, ಶರಣ್ ಮನೆಯಲ್ಲಿ ಇರಲ್ಲ. ಹಾಗಾದ್ರೆ ಎಲ್ಲಿರ್ತಾರೆ..?

ನನಗೂ ಅಭಿಮಾನಿಗಳ ಜೊತೆ ಮನೆಯೆದುರೇ ಹುಟ್ಟುಹಬ್ಬ ಆಚರಿಸಿಕೊಳ್ಳಬೇಕು ಅನ್ನೋ ಆಸೆ ಇದೆ. ಯಾಕಂದ್ರೆ, ಅಭಿಮಾನಿಗಳೇ ನಾವು ಸಂಪಾದಿಸಿರುವ ಆಸ್ತಿ. ಆದರೆ, ಮೊದಲಿನಿಂದಲೂ ಹುಟ್ಟುಹಬ್ಬದ ದಿನ ಯಾವುದಾದರೂ ದೇವಸ್ಥಾನಕ್ಕೆ ಹೋಗುವ ಅಭ್ಯಾಸ ಬೆಳೆದುಕೊಂಡು ಬಂದಿದೆ. ಕುಟುಂಬ ಸಮೇತ ದೇವರ ಸನ್ನಿಧಿಯಲ್ಲೇ ಹುಟ್ಟುಹಬ್ಬ ಆಚರಿಸುತ್ತೇವೆ. ಕಳೆದ ವರ್ಷ ತಿರುಪತಿಗೆ ಹೋಗಿದ್ದೆವು. ಈ ಬಾರಿ ದಕ್ಷಿಣ ಕರ್ನಾಟಕದ ದೇವಸ್ಥಾನಗಳಿಗೆ ಹೊರಟಿದ್ದೇವೆ ಎಂದಿದ್ದಾರೆ ಶರಣ್.

ಶರಣ್ ಹುಟ್ಟುಹಬ್ಬಕ್ಕೆಂದೇ ಅವತಾರ ಪುರುಷ ಚಿತ್ರ ತಂಡ ವಿಶೇಷ ಟೀಸರ್ ರಿಲೀಸ್ ಮಾಡುತ್ತಿದೆ. ಅಷ್ಟದಿಗ್ಬಂದನ ಮಂಡಲಕ ಅನ್ನೋ ಸ್ಪೆಷಲ್ ಟೈಟಲ್ ಕೊಟ್ಟಿರೋ ಸುನಿ ಮತ್ತು ಪುಷ್ಕರ್ ಮಲ್ಲಿಕಾರ್ಜುನಯ್ಯ, ಶರಣ್ ಹುಟ್ಟುಹಬ್ಬವನ್ನು ದೊಡ್ಡ ಮಟ್ಟದಲ್ಲೇ ಸೆಲಬ್ರೇಟ್ ಮಾಡುತ್ತಿದ್ದಾರೆ.