` ತಪ್ಪು ಅಂದ್ರೆ ತಿರುಗಿ ನೋಡ್ತಾರೆ ನಿಶ್ವಿಕಾ..! - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
if you call thappu, nishvika naidu turns back
Nishvika Naidu

ಆಕೆಯನ್ನು ಎಲ್ಲರೂ ಕರೆಯೋದು ತಪ್ಪು.. ತಪ್ಪು.. ಅಂತಲೇ. ಯಾಕಂದ್ರೆ ಅದು ಆಕೆಗೆ ಅಭ್ಯಾಸವಾಗಿ ಹೋಗಿದೆ. ತಪ್ಪು ಅವಳದ್ದಲ್ಲ. ಏಕೆಂದರೆ, ಆಕೆಯ ಹೆಸರೇ ತಪಸ್ವಿನಿ. ಅದು ಶಾರ್ಟ್ & ಸ್ವೀಟ್ ಆಗಿ ತಪ್ಪು ಆಗಿದೆ.

ಇದು ಜಂಟಲ್‍ಮನ್ ನಾಯಕಿ ನಿಶ್ವಿಕಾ ನಾಯ್ಡು ಕಥೆ. ಪ್ರಜ್ವಲ್ ದೇವರಾಜ್ ಎದುರು ನಾಯಕಿಯಾಗಿರೋ ನಿಶ್ವಿಕಾ ನಾಯ್ಡು, ಇಲ್ಲಿ ಡಯಟಿಷಿಯನ್ ಆಗಿ ನಟಿಸಿದ್ದಾರೆ. ದಿನಕ್ಕೆ 18 ಗಂಟೆ ನಿದ್ರೆ ಮಾಡಿ, 6 ಗಂಟೆಯಷ್ಟೇ ಎಚ್ಚರ ಇರೋ ನಾಯಕನಿಗೆ ಆಹಾರ ಹೇಗಿರಬೇಕು.. ಏನಿರಬೇಕು ಎಂದು ಗೈಡ್ ಮಾಡುವ ಪಾತ್ರವದು. ನಾಯಕನಿಗೆ ಡಯಟ್ ಹೇಳಿಕೊಡುತ್ತಲೇ ಆತನ ಜೊತೆಯಲ್ಲಿ ಪ್ರೀತಿಗೆ ಬೀಳುವ ತಪಸ್ವಿನಿ ಅರ್ಥಾತ್ ತಪ್ಪು.. ಮುಂದೆ ಎದುರಿಸುವ ಸವಾಲುಗಳೇ ಚಿತ್ರದ ಕಥೆ.

ಫಸ್ಟ್ ಟೈಂ ಈ ಚಿತ್ರದಲ್ಲಿ ಸೀರೆಯಲ್ಲಿ ಟ್ರೆಡಿಷನಲ್ ಆಗಿ ನಟಿಸಿದ್ದೇನೆ. ಸಿನಿಮಾದಲ್ಲಿ ಪ್ರೇಕ್ಷಕರಿಗೆ ಹೊಸ ಹೊಸ ವಿಷಯಗಳಿವೆ. ಅರೆರೆ.. ಮತ್ತು ಮರಳಿ ಮನಸ್ಸಾಗಿದೆ.. ಹಾಡುಗಳೂ ಹಿಟ್ ಆಗಿವೆ. ಚಿತ್ರದ ಮೇಲೆ ಭಾರಿ ನಿರೀಕ್ಷೆ ಇದೆ ಎನ್ನುತ್ತಾರೆ ನಿಶ್ವಿಕಾ ನಾಯ್ಡು.

ಜಡೇಶ್ ಕುಮಾರ್ ನಿರ್ದೇಶನದ ಚಿತ್ರಕ್ಕೆ ಗುರು ದೇಶಪಾಂಡೆ ನಿರ್ಮಾಪಕರಾಗಿದ್ದಾರೆ.