ಬೆಲ್‍ಬಾಟಂ ಹೀರೋ ಆಗಿ ಗೆದ್ದ ರಿಷಬ್ ಶೆಟ್ಟಿ, ಮತ್ತೊಮ್ಮೆ ನಿರ್ದೇಶನದತ್ತ ಹೊರಳಿದ್ದಾರೆ. ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಚಿತ್ರದ ರುದ್ರಪ್ರಯಾಗ ಚಿತ್ರ ಅನೌನ್ಸ್ ಮಾಡಿದ್ದ ರಿಷಬ್ ಶೆಟ್ಟಿ, ಮಾರ್ಚ್ 1ರಿಂದ ಶೂಟಿಂಗ್ ಶುರು ಮಾಡುತ್ತಿದ್ದಾರೆ.
ಪ್ರಿ ಪ್ರೊಡಕ್ಷನ್ ಕೆಲಸಗಳನ್ನು ಹೆಚ್ಚೂ ಕಡಿಮೆ ಮುಗಿಸಿಕೊಂಡೇ ಚಿತ್ರೀಕರಣಕ್ಕೆ ಕೈ ಹಾಕುತ್ತಿದ್ದಾರೆ ರಿಷಬ್. ಚಿತ್ರಕ್ಕೆ ಗ್ರಾಫಿಕ್ಸ್ ಕೆಲಸ ಬಹಳ ಸೂಕ್ಷ್ಮವಾಗಿದ್ದು, ಸೆಟ್, ಪ್ರಾಪರ್ಟಿ ಡಿಸೈನ್ ಮತ್ತು ರಿಹರ್ಸಲ್ ಮುಗಿಸಿಕೊಂಡೇ ಚಿತ್ರೀಕರಣಕ್ಕೆ ಹೊರಟಿದೆ ರುದ್ರಪ್ರಯಾಗ ಟೀಂ.
ಬೆಳಗಾವಿ, ಉತ್ತರಾಖಂಡಗಳಲ್ಲಿ, ಮಂದಾಕಿನಿ, ಅಲಕನಂದಾ ನದಿಗಳ ಸಂಗಮದಲ್ಲಿ ಚಿತ್ರೀಕರಣ ನಡೆಯಲಿದೆ. ಜಯಣ್ಣ ಬ್ಯಾನರ್‍ನಲ್ಲಿ ನಿರ್ಮಾಣವಾಗುತ್ತಿರುವ ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತವಿದ್ದರೆ, ಅರವಿಂದ ಕಶ್ಯಪ್ ಕ್ಯಾಮೆರಾ ವರ್ಕ್ ಇದೆ.