` ಎಗ್ ಶೆಲ್ ಕಳ್ಳಸಾಗಣೆಯ ಹೊಸ ಕಥೆ ಜಂಟಲ್‍ಮನ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
gentleman talks about egg shell mafia
Gentleman Movie Image

ಎಗ್ ಶೆಲ್ ಟ್ರಾಫಿಕಿಂಗ್ ಮಾಫಿಯಾ. ಇದು ಈಗ ಜಗತ್ತನ್ನು ಆಳುತ್ತಿರುವ ಹೊಸ ದಂಧೆ. ಪುಟ್ಟ ಪುಟ್ಟ ವಯಸ್ಸಿನ ಹೆಣ್ಣು ಮಕ್ಕಳ ಅಂಡಾಣುಗಳನ್ನು ಮಾರುವ ದಂಧೆ. ಒಂದು ಎಗ್ ಶೆಲ್ ವ್ಯಾಲ್ಯೂ 5ರಿಂದ 10 ಲಕ್ಷ ರೂ. ಇದೆ. ಆ ಎಗ್ ಶೆಲ್‍ಗಾಗಿ ಅವರು ಕಿಡ್ನಾಪ್ ಮಾಡುವುದು 15.. 16.. ವರ್ಷದ ಹೆಣ್ಣು ಮಕ್ಕಳನ್ನು. ಇಂಥಾದ್ದೊಂದು ವಿಭಿನ್ನ ಕಥೆಯನ್ನಿಟ್ಟುಕೊಂಡು ಸಿನಿಮಾ ಮಾಡಿದ್ದಾರೆ ಜಡೇಶ್ ಕುಮಾರ್.

ಜಂಟಲ್‍ಮನ್ ಚಿತ್ರದ ಟ್ರೇಲರ್ ಕುತೂಹಲ ಹುಟ್ಟಿಸುವುದೇ ಅಲ್ಲಿ. ದಿನಕ್ಕೆ 18 ಗಂಟೆ ನಿದ್ರೆ ಮಾಡುವ ಹೀರೋ.. ಆತ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುವ ಅಣ್ಣನ ಪುಟಾಣಿ ಮಗಳು.. ಪ್ರೀತಿಸುವ ಡಯಟಿಷಿಯನ್.. ನಡುವೆ ಮಾಫಿಯಾ..

ಒಟ್ಟಿನಲ್ಲಿ ಜಡೇಶ್, ಪ್ರಜ್ವಲ್ ದೇವರಾಜ್, ಸಂಚಾರಿ ವಿಜಯ್, ನಿಶ್ವಿಕಾ ನಾಯ್ಡು ಅವರ ಜೊತೆ ಹೊಚ್ಚ ಹೊಸ ಕಥೆ ಹೇಳಲು ರೆಡಿಯಾಗಿ ನಿಂತಿದ್ದಾರೆ. ಗುರು ದೇಶಪಾಂಡೆ ಹೊಸ ನಿರ್ದೇಶಕನ ವಿಭಿನ್ನ ಪ್ರಯತ್ನಕ್ಕೆ ಬೆನ್ನೆಲುಬಾಗಿ ನಿಂತಿದ್ದಾರೆ. ಚಿತ್ರ ಇದೇ ವಾರ ರಿಲೀಸ್.