ಜಂಟಲ್‍ಮನ್ ಸಿನಿಮಾ ಆಡಿಯೋ ರಿಲೀಸ್ ವೇಳೆ ದರ್ಶನ್ ಹೇಳಿದ ಮಾತಿದು. ಅವರು ಹಾಗೆ ಹೇಳೋಕೆ ಕಾರಣವೂ ಇದೆ. ಕನ್ನಡದವರು ಬೇರೆ ಭಾಷೆಯ ಸಿನಿಮಾಗಳನ್ನ ನೋಡ್ತಾರೆ. ಅಲ್ಲಿ ಒಳ್ಳೆಯ ಸಿನಿಮಾ ಆದರೆ, ದೊಡ್ಡ ಸಿನಿಮಾ ಬಂದರೆ ನೋಡಿ ಬೆನ್ನು ತಟ್ಟುತ್ತಾರೆ. ಆದರೆ, ಅಂತಹುದೇ ಕನ್ನಡದಲ್ಲಿ ಆದರೆ ದೂರ ಹೋಗುತ್ತಾರೆ. ಇದು ಅಸಹ್ಯ ಬರಿಸುತ್ತದೆ. ಕನ್ನಡಿಗರು ಅಂಡು ಬಗ್ಗಿಸಿಕೊಂಡು ಕನ್ನಡ ಸಿನಿಮಾ ನೋಡಿದಾಗ ಮಾತ್ರ ಕನ್ನಡ ಚಿತ್ರರಂಗದ ಬೆಳವಣಿಗೆ, ಅಭಿವೃದ್ದಿ ಸಾಧ್ಯ ಎಂದಿದ್ದಾರೆ ದರ್ಶನ್.
ಏಕೆಂದರೆ ಜಂಟಲ್‍ಮನ್ ಕೂಡಾ ಅಂತಹುದೇ ಸಿನಿಮಾ. ದಿನಕ್ಕೆ 18 ಗಂಟೆ ನಿದ್ರೆ ಮಾಡುವ, 6 ಗಂಟೆಯಷ್ಟೇ ಎಚ್ಚರ ಇರಲು ಸಾಧ್ಯವಿರುವ ವ್ಯಕ್ತಿಯೊಬ್ಬ ತನ್ನ ಜೀವನದಲ್ಲಿ ಎದುರಾಗುವ ಸವಾಲುಗಳನ್ನು ಮೆಟ್ಟಿ ನಿಲ್ಲುವ ಕಥೆ. ಪ್ರಜ್ವಲ್ ದೇವರಾಜ್, ನಿಶ್ವಿಕಾ ನಾಯ್ಡು, ಸಂಚಾರಿ ವಿಜಯ್ ನಟಿಸಿರುವ ಚಿತ್ರಕ್ಕೆ ಜಡೇಶ್ ಕುಮಾರ್ ನಿರ್ದೇಶಕರಾದರೆ, ಗುರು ದೇಶಪಾಂಡೆ ನಿರ್ಮಾಪಕರು.