ಕನ್ನಡ ಚಿತ್ರಗಳ ವಿತರಣೆ ಪದ್ಧತಿಯಲ್ಲಿ ಅಮೂಲಾಗ್ರ ಬದಲಾವಣೆಗೆ ಕೈ ಹಾಕಿದೆ ಚಲನಚಿತ್ರ ನಿರ್ಮಾಪಕರ ಸಂಘ. ಸದ್ಯಕ್ಕೆ ಕನ್ನಡದಲ್ಲಿ ಹಲವು ಪದ್ಧತಿಗಳು ಜಾರಿಯಲ್ಲಿವೆ. ಮೊದಲೇ ಬಾಡಿಗೆ ನೀಡಿ ಚಿತ್ರಮಂದಿರವನ್ನು ಬುಕ್ ಮಾಡಿಕೊಳ್ಳುವುದು, ಕಮಿಷನ್ ಆಧಾರದ ಮೇಲೆ ಬಾಡಿಗೆ ಹಾಗೂ ಪರ್ಸಂಟೇಜ್ ವ್ಯವಹಾರ. ಈಗ ಆ ಎಲ್ಲದಕ್ಕೂ ತಿಲಾಂಜಲಿ ನೀಡಿ ಪರ್ಸೆಂಟೇಜ್ ಪದ್ಧತಿಯನ್ನಷ್ಟೇ ಉಳಿಸಿಕೊಳ್ಳೋ ನಿರ್ಧಾರಕ್ಕೆ ಬಂದಿದೆ ಚಲನಚಿತ್ರ ನಿರ್ಮಾಪಕರ ಸಂಘ.
ಈ ಕುರಿತು ಸಮಿತಿಯೊಂದನ್ನು ರಚಿಸಲಿದ್ದು, ಆ ಸಮಿತಿಯಲ್ಲಿ ನಿರ್ಮಾಪಕರ ಸಂಘ, ವಿತರಕರ ಸಂಘ ಮತ್ತು ಪ್ರದರ್ಶಕರ ಸಂಘದ ಪ್ರತಿನಿಧಿಗಳು ಇರಲಿದ್ದಾರೆ. ಏಪ್ರಿಲ್ 2ರಿಂದ ಹೊಸ ಪದ್ಧತಿ ಜಾರಿಗೆ ಬರುವ ನಿರೀಕ್ಷೆ ಇದೆ.
ಹೊಸ ಪದ್ಧತಿ ಪ್ರಕಾರ ಚಿತ್ರಮಂದಿರಗಳನ್ನು ಎ,ಬಿ,ಸಿ ಎಂದು ವಿಂಗಡಿಸಿ, ಅದರ ಆಧಾರದ ಮೇಲೆ ಪರ್ಸಂಟೇಜ್ ನಿಗದಿ ಮಾಡಲಾಗುತ್ತದೆ. ಆದರೆ, ಇದು ಮೇಲ್ನೋಟಕ್ಕೆ ಕಾಣುವಷ್ಟು ಸುಲಭವಲ್ಲ, ಸರಳವೂ ಆಗಿಲ್ಲ. ಹೀಗಾಗಿ ಈ ಹೊಸ ನಿಯಮ ಜಾರಿ ಹೇಗಾಗಲಿದೆ ಎಂಬ ಕುತೂಹಲ ಎಲ್ಲರಲ್ಲೂ ಇದೆ.