ಅಮೃತಮತಿಯ ಕಥೆ ಗೊತ್ತಿದ್ದವರಿಗೆ ಅದು ಗೊತ್ತಿದ್ದೇ ಇರುತ್ತೆ. ಸುಂದರ ರಾಜ ಗಂಡನಾಗಿದ್ದರೂ, ಅಷ್ಟಾವಂಕನ ಜೊತೆ ಅಕ್ರಮ ಸಂಬಂಧ ಬೆಳೆಸುವ ಅಮೃತಮತಿ, ಅದು ತನ್ನ ಪತಿ ಮತ್ತು ಮನೆಯವರಿಗೆ ತಿಳಿಯಿತು ಎಂದು ಗೊತ್ತಾದ ಮೇಲೆ ಎಲ್ಲರಿಗೂ ವಿಷವಿಟ್ಟು ಕೊಂದುಬಿಡುತ್ತಾಳೆ. ಆದರೆ, ಅದೇ ಕಥೆಯನ್ನಿಟ್ಟುಕೊಂಡು ಸಿನಿಮಾ ಮಾಡಿರುವ ಬರಗೂರು, ಕಥೆಯನ್ನು ಬದಲಿಸಿದ್ದಾರೆ.
ಅದು ಹೆಣ್ಣಿನ ಘನತೆ ಹೆಚ್ಚಿಸುವಂತಿದೆ ಎನ್ನುವ ಬರಗೂರು, ಯಶೋಧರ ಚರಿತೆಯ ಅಮೃತಮತಿಗೆ ಈ ಸಿನಿಮಾದಲ್ಲಿ ಮರುಹುಟ್ಟು ಕೊಟ್ಟಿದ್ದೇನೆ ಎನ್ನುತ್ತಾರೆ. ಬರಗೂರು ರಾಮಚಂದ್ರಪ್ಪ ಅವರಿಗೆ ಹರಿಪ್ರಿಯಾ ಅವರ ನಟನೆ ಅದೆಷ್ಟು ಇಷ್ಟವಾಗಿದೆ ಎಂದರೆ, ಹರಿಪ್ರಿಯಾ ಇದ್ದಿದ್ದರೆ, ಹರಿಪ್ರಿಯಾರಂತೆಯೇ ಇರುತ್ತಿದ್ದರು ಎನ್ನುವಷ್ಟು.
ಬರಗೂರು ರಾಮಚಂದ್ರಪ್ಪನವರ ವಿದ್ಯಾರ್ಥಿ ಕಿಶೋರ್, ಯಶೋಧರನಾಗಿ ನಟಿಸಿದ್ದರೆ, ತಿಲಕ್ ಅಷ್ಟಾವಂಕನಾಗಿದ್ದಾರೆ. ಸುಂದರ್ ರಾಜ್-ಪ್ರಮೀಳಾ ಜೋಷಾಯ್, ಯಶೋಧರನ ತಂದೆತಾಯಿಯಾಗಿದ್ದಾರೆ. ಇಂಚರ ಪ್ರೊಡಕ್ಷನ್ಸ್‍ನ ಪುಟ್ಟಣ್ಣ ನಿರ್ಮಾಣದ ಚಿತ್ರ ಅಮೃತಮತಿ.