ಮಿಲನ ನಾಗರಾಜ್, ಗ್ಲಾಮರ್ ಗೊಂಬೆ. ತಾವೊಬ್ಬ ಉತ್ತಮ ನಟಿ ಎಂದು ಸಾಬೀತು ಮಾಡಿರುವ ಮಿಲನ ಈಗ ರಾಜಕಾರಣಿಯಾಗಿದ್ದಾರೆ. ವೃತ್ತಿಯ ಆರಂಭದ ದಿನಗಳಲ್ಲೇ ಪಾಲಿಟಿಕ್ಸ್ಗೆ ಬಂದ್ರಾ ಎನ್ನಬೇಡಿ, ಅವರು ಮಾಡಿರುವುದೇ ರಾಜಕಾರಣಿಯ ಪಾತ್ರ. ಮತ್ತೆ ಉದ್ಭವ ಚಿತ್ರದಲ್ಲಿ.
ರಾಜಕೀಯದಲ್ಲಿ ನನಗೆ ಆಸಕ್ತಿಯೇ ಇಲ್ಲ. ರಾಜಕೀಯ ಸುದ್ದಿಗಳನ್ನೂ ಓದಲ್ಲ ಎನ್ನುವ ಮಿಲನಾಗೆ, ಪಾತ್ರದಲ್ಲಿ ನಟಿಸಿದ ಮೇಲೆ ಗೊತ್ತಾಗಿರೋದು ಏನಂದ್ರೆ, ರಾಜಕೀಯ ಸುಲಭ ಅಲ್ಲ. ಅವರಿಗೆ ಸಿಕ್ಕಾಪಟ್ಟೆ ಪ್ರೆಶರ್ ಇರುತ್ತೆ ಅನ್ನೋ ಸತ್ಯ.
ಇನ್ನು ಮಿಲನಾಗೆ ಜನರ ರಾಜಕೀಯವೂ ಅರ್ಥವಾಗಲ್ಲ. ಜನರೂ ಹೇಗಾಗಿದ್ದಾರೆ ಅಂದ್ರೆ, ತಾವು ಇಷ್ಟಪಡುವ ವ್ಯಕ್ತಿ, ಪಕ್ಷ ಏನೇ ಮಾಡಿದರೂ ವಹಿಸಿಕೊಂಡು ಬರ್ತಾರೆ. ಎದುರಾಳಿಯವರು ಏನೇ ಮಾಡಿದ್ರೂ ವಿರೋಧಿಸ್ತಾರೆ. ಸರಿ, ತಪ್ಪು ಅನ್ನೋದನ್ನ ನೋಡಲ್ಲ. ನಾವು ನಂಬುವ ರಾಜಕಾರಣಿ, ಪಕ್ಷ ಯಾವಾಗಲೂ 100% ಸರಿ ಮಾಡುತ್ತೆ ಅಂತಾ ನಂಬೋದು ತಪ್ಪು ಎನ್ನುತ್ತಾರೆ ಮಿಲನಾ. ಸ್ಸೋ.. ಹೀಗಿರುವ ಮಿಲನ, ರಾಜಕೀಯಕ್ಕೆ ಸೂಟ್ ಆಗಲ್ಲ ಅನ್ನೋದು ಕನ್ಫರ್ಮ್ ಆಯ್ತು.
ಅಂದಹಾಗೆ ಮಿಲನ ರಾಜಕಾರಣಿಯಾಗಿರೋ ಮತ್ತೆ ಉದ್ಭವ ಇದೇ ವಾರ ರಿಲೀಸ್ ಆಗುತ್ತಿದೆ. ಕೂಡ್ಲು ರಾಮಕೃಷ್ಣ ನಿರ್ದೇಶನದ ಚಿತ್ರದಲ್ಲಿ ಪ್ರಮೋದ್, ರಂಗಾಯಣ ರಘು ನಟಿಸಿದ್ದಾರೆ.