ಡಿಂಗ ಚಿತ್ರ ಎಲ್ಲರ ಗಮನ ಸೆಳೆದಿದ್ದೇ ಇದು ಐಫೋನ್‍ನಲ್ಲಿ ಚಿತ್ರೀಕರಣಗೊಂಡ ಸಿನಿಮಾ ಎನ್ನುವ ಕಾರಣಕ್ಕೆ. ಆದರೆ, ಅದಕ್ಕಿಂತಲೂ ವಿಭಿನ್ನವಾಗಿ ಚಿತ್ರ ಗಮನ ಸೆಳೆದಿರುವುದು ಚಿತ್ರದ ಕಥೆ, ಚಿತ್ರಕಥೆಗೆ. ಪುಟ್ಟದೊಂದು ನಾಯಿಯ ಸುತ್ತ ಭಾವನೆಗಳ ಕೋಟೆಯನ್ನೇ ಕಟ್ಟುವ ನಿರ್ದೇಶಕ ಅಭಿಷೇಕ್ ಜೈನ್, ಡಿಂಗನನ್ನು ನೋಡುವವರ ಕಣ್ಣಂಚನ್ನು ಎರಡು ಬಾರಿ ಒದ್ದೆಯಾಗಿಸಿ ಗೆದ್ದಿದ್ದಾರೆ.
ಮೊದಲನೆಯದಾಗಿ ನಕ್ಕೂ ನಕ್ಕೂ ಕಣ್ಣಲ್ಲಿ ನೀರು ಬಂದರೆ, ಎರಡನೆಯದಾಗಿ ಭಾವುಕ ದೃಶ್ಯಗಳು ಕಣ್ಣು ಒದ್ದೆಯಾಗಿಸುತ್ತವೆ. ಆರವ್ ಗೌಡ, ಅನುಷಾ ನಟಿಸಿರುವ ಚಿತ್ರದಲ್ಲಿ ಭಾವುಕತೆಯ ದೃಶ್ಯಗಳ ಮೆರವಣಿಗೆಯೇ ಇದೆ. ಪ್ರೇಕ್ಷಕರಿಗೆ ಇಷ್ಟವಾಗಿರುವುದೇ ಇದು.