ಪ್ರೀತಿ ಸಿಗದೇ ಸತ್ತವರು, ಪ್ರೇಮ ವೈಫಲ್ಯ ಅನುಭವಿಸಿದವರು ದೆವ್ವಗಳಾಗೋದು ಕಾಮನ್. ಪ್ರೀತಿಸುತ್ತಿದ್ದರೂ.. ಪ್ರೀತಿಸಲಾಗದೆ.. ಇನ್ಯಾವುದೋ ಕಾರಣಕ್ಕೆ ಸತ್ತವರು ಕೂಡಾ ದೆವ್ವವಾಗ್ತಾರೆ. ಕಾಮನ್ ಅಂದ್ರೆ ಕಾಮನ್. ಏಕೆಂದರೆ ಇದು ಸಿನಿಮಾ ಸೂತ್ರ. ಆದರೆ.. ಪ್ರೀತಿಸಿದವಳನ್ನು ಕಾವಲು ಕಾಯಲು ಅವಳು ಪ್ರೀತಿಸಿದವನೇ ದೆವ್ವವಾಗಿ ಬಂದರೆ.. ಆಗ ಅದು ಕಾಣದಂತೆ ಮಾಯವಾದನು ಚಿತ್ರವಾಗುತ್ತೆ. ಏಕೆಂದರೆ ಇದು ಘೋಸ್ಟ್ ಲವ್ ಸ್ಟೋರಿ.
ಕೇಳುವುದಕ್ಕೇ ವಿಭಿನ್ನವಾಗಿರುವ ಈ ಚಿತ್ರಕ್ಕೆ ಜಯಮ್ಮನ ಮಗ ಚಿತ್ರದ ನಿರ್ದೇಶಕ ವಿಕಾಸ್ ಹೀರೋ. ಸಿಂಧು ಲೋಕನಾಥ್ ಹೀರೋಯಿನ್. ಅಚ್ಯುತ್ ಕುಮಾರ್ ಕೂಡಾ ದೆವ್ವಾನೇ. ಆದರೆ ಕೈಯ್ಯಲ್ಲಿ ಬಂದೂಕಿರುತ್ತೆ. ಆರ್ಮಿ ಯೂನಿಫಾರ್ಮ್ ಇರುತ್ತೆ. ಚಿತ್ರದ ಇನ್ನೊಂದು ವಿಶೇಷ ಅಂದ್ರೆ ವಿಲನ್ ಆಗಿ ನಟಿಸಿರುವುದು ದಿ. ಉದಯ್. ಚಿತ್ರೀಕರಣದ ಅರ್ಧದಲ್ಲಿಯೇ ಅವರ ಮೃತಪಟ್ಟ ನಂತರ ಉದಯ್ ಪಾತ್ರಕ್ಕೆ ಪರಕಾಯ ಪ್ರವೇಶ ಮಾಡಿರುವುದು ಭಜರಂಗಿ ಲೋಕಿ. ರಾಜ್ ಪತಿಪಾಟಿ. ಚಂದ್ರಶೇಖರ್ ನಾಯ್ಡು, ಸೋಮ್ ಸಿಂಗ್ ಮತ್ತು ಪುಷ್ಪಾ ಸೋಮ್ ಸಿಂಗ್ ಚಿತ್ರದ ನಿರ್ಮಾಪಕರು. ಸಿನಿಮಾ ಇದೇ ವಾರ ರಿಲೀಸ್ ಆಗುತ್ತಿದೆ.