ನಿನ್ ಹೆಸರನ್ನು ಯಾಕೆ ನೀವೇ ಬಂಟಿ ಅಂಥಾ ಇಟ್ಕೊಂಡಿದ್ದಿರಾ..?
ನಂಗೆ ಬನ್ನು, ಟೀ ಅಂದ್ರೆ ಇಷ್ಟ ಸಾರ್.. ಅದಕ್ಕೆ..
ಕಚಗುಳಿ ಶುರುವಾಗುವುದೇ ಹೀಗೆ.. ಇದು ಡಿಂಗನ ಲೋಕ. ಡಿಂಗ ಅಂದ್ರೆ ಬಂಟಿಯ ಮಗ. ಅಯ್ಯೋ ಅವನು ಮದುವೆ ಆಗಿಲ್ಲ. ಹಂಗಾದ್ರೆ ಮಗ ಹೆಂಗೆ.. ಡಿಂಗ ಅಂದ್ರೆ ಅವನ ಪ್ರೀತಿಯ ನಾಯಿ.
ಅವನಿಗೊಬ್ಬ ಪ್ರೀತಿಯ ಗೆಳೆಯ. ಅವನ ಹೆಸರು ತರುಣ್. ನನ್ ಫ್ರೆಂಡ್ನ್ನ ಬೇಗ ಕರೆಸ್ಕೊಳ್ಳಪ್ಪಾ ಅಂತಾ ಬೇಡಿಕೊಳ್ಳುವಷ್ಟು ಪ್ರೀತಿಯ ಗೆಳೆಯ. ಬೆಳ್ಳಂಬೆಳಗ್ಗೆ ನಗ್ನ ದೇವರ ದರ್ಶನ ತೋರಿಸಿದವನಿಗೆ ಅವನಾದರೂ ಇನ್ನೇನು ಕೇಳ್ಕೊತಾನೇ.. ಅಲ್ವಾ..?
ಅಲ್ಲೊಬ್ಬಳು ಸುಂದರಿಯೂ.. ಇವನಿಗೆ ಕ್ಯಾನ್ಸರೂ ಬಂದಾಗ.. ಕಥೆಯಲ್ಲೊಂದು ಇಂಟ್ರೆಸ್ಟಿಂಗ್ ಟ್ರ್ಯಾಕ್ ಶುರುವಾಗುತ್ತೆ. ನನ್ನ ಡಿಂಗನನ್ನು ನನಗಿಂತಲೂ ಹೆಚ್ಚು ಪ್ರೀತಿಸುವವರಿಗೆ ಕೊಡಲು ನಿರ್ಧರಿಸಿ ಹುಡುಕಾಟಕ್ಕೆ ಹೊರಡುತ್ತಾನೆ ಬಂಟಿ.
ಆಗ ಶುರುವಾಗುವುದೇ ಡಿಂಗ ಎಂಬ ಹೃದಯವನ್ನೇ ತಲ್ಲಣಗೊಳಿಸುವ ಕಥೆ. ಇದು ಡಿಂಗನ ಕಥೆ. ಅಭಿಷೇಕ್ ಜೈನ್ ಎಂಬ ನಿರ್ದೇಶಕ, ಐಫೋನ್ನಲ್ಲಿಯೇ ಚಿತ್ರೀಕರಣ ಮಾಡಿ ತೆರೆಗೆ ತರುತ್ತಿರೋ ಸಿನಿಮಾ ಇದು. ಡಾಕ್ಟರ್ ಮೂಗೂರು ದೀಕ್ಷಿತ್ ನಿರ್ಮಾಪಕರು. ಒಂದು ವಿಭಿನ್ನ ಕಥೆಯ ಸಿನಿಮಾ ಇದೇ ವಾರ ರಿಲೀಸ್ ಆಗುತ್ತಿದೆ.
--