ಅಧ್ಯಕ್ಷನಾಗಿ.. ಕಳ್ಳನಾಗಿ.. ರೋಮಿಯೋ ಆಗಿ.. ಹುಡುಗಿಯಾಗಿ.. ಹಲವು ಅವತಾರಗಳಲ್ಲಿ ಕಾಣಿಸಿಕೊಂಡಿರೋ ಶರಣ್, ಈ ಬಾರಿ ಒಂದೇ ಚಿತ್ರದಲ್ಲಿ ಏಳೆಂಟು ಅವತಾರ ಎತ್ತಿದ್ದಾರೆ. ಅವತಾರ ಪುರುಷ ಚಿತ್ರದಲ್ಲಿ. ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಣದ ಚಿತ್ರದಲ್ಲಿ ಅವತಾರ್ ಪುರುಷ ಶರಣ್ಗೆ ಅಶಿಕಾ ರಂಗನಾಥ್ ಜೋಡಿಯಾಗಿದ್ದಾರೆ. ಇದು ಕಂಪ್ಲೀಟ್ ಸಿಂಪಲ್ ಸುನಿ ಎನ್ನುವ ಶರಣ್ ‘‘ಚಿತ್ರದಲ್ಲಿ ಏಳೆಂಟು ಅವತಾರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಎರಡು ಹಾಡು ಶೂಟಿಂಗ್ ಬ್ಯಾಲೆನ್ಸ್ ಇದೆ. ಲೆಕ್ಕಾಚಾರದ ಪ್ರಕಾರವೇ ಎಲ್ಲವೂ ನಡೆದರೆ, ಬೇಸಗೆಯಲ್ಲಿ ಸಿನಿಮಾ ರಿಲೀಸ್’’ ಎಂದು ಮಾಹಿತಿ ನೀಡಿದ್ದಾರೆ.
ನಾನು ಈವರೆಗೆ ಮಾಡಿರುವ ಪಾತ್ರಗಳಿಗೆ ಹೋಲಿಸಿದರೆ ಇದು ತುಂಬಾ ವಿಭಿನ್ನ. ನಾನು ವಿಪರೀತ ಪ್ರಯೋಗಕ್ಕೆ ಹೋಗಲ್ಲ. ನನಗೆ ನನ್ನ ಲಿಮಿಟ್ ಗೊತ್ತಿದೆ. ಈ ಚಿತ್ರದಲ್ಲಿ ಲವ್, ಸೆಂಟಿಮೆಂಟ್, ಸಸ್ಪೆನ್ಸ್, ಥ್ರಿಲ್ಲರ್, ಮಿಸ್ಟರಿ, ಡ್ರಾಮಾ ಎಲ್ಲವೂ ಇದೆ. ಜೊತೆಯಲ್ಲಿ ಬ್ಲಾಕ್ ಮ್ಯಾಜಿಕ್ ಕೂಡಾ ಇದೆ. ಬ್ಲಾಕ್ ಮ್ಯಾಜಿಕ್ ಕಥಾ ಹಂದರದ ಚಿತ್ರದಲ್ಲಿ ನಟಿಸುತ್ತಿರುವುದು ಇದೇ ಮೊದಲು ಎಂದಿದ್ದಾರೆ ಶರಣ್.
ಬ್ಲಾಕ್ ಮೆಜಿಷಿಯನ್ ಅವತಾರದಲ್ಲಿ ಶ್ರೀನಗರ ಕಿಟ್ಟಿ ನಟಿಸಿದ್ದರೆ, ಭವ್ಯಾ ಅತ್ಯಂತ ಪ್ರಮುಕ ರೋಲ್ನಲ್ಲಿದ್ದಾರೆ. ಅರ್ಜುನ್ ಜನ್ಯ ಸಂಗೀತವಿದೆ.