` 6 ಸಾವಿರ ಅಘೋರಿಗಳ ಮಧ್ಯೆ ಶ್ರೀಮುರಳಿ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
madagaja image
sri murali in madagaja

5ರಿಂದ 6 ಸಾವಿರ ಅಘೋರಿಗಳು. ಕಾಶಿಯ ಪುಣ್ಯಭೂಮಿಯಲ್ಲಿ ಸೇರುವುದು ಅಪರೂಪವೇನಲ್ಲ. ಅಂತಹ ಪುಣ್ಯಕ್ಷೇತ್ರದಲ್ಲಿ ಅಷ್ಟೊಂದು ಅಘೋರಿಗಳ ಮಧ್ಯೆ ನಮ್ಮ ರೋರಿಂಗ್ ಸ್ಟಾರ್ ಶ್ರೀಮುರಳಿ ಇದ್ದರೆ.. ಅಂಥಾದ್ದೊಂದು ವಿಭಿನ್ನ ದೃಶ್ಯದ ಚಿತ್ರೀಕರಣಕ್ಕೆ ಸಜ್ಜಾಗಿದ್ದಾರೆ ಶ್ರೀಮುರಳಿ. ಅದೂ ಶಿವರಾತ್ರಿಯ ದಿನ. ಮದಗಜ ಚಿತ್ರಕ್ಕಾಗಿ.

ಅಯೋಗ್ಯ ಖ್ಯಾತಿಯ ಮಹೇಶ್ ಕುಮಾರ್ ನಿರ್ದೇಶಿಸುತ್ತಿರುವ ಚಿತ್ರ ಮದಗಜ. ಈ ಚಿತ್ರದ ಮುಹೂರ್ತದ ನಂತರ ಚಿತ್ರದ ಪ್ರಧಾನ ದೃಶ್ಯದ ಚಿತ್ರೀಕರಣ ನಡೆಯುವುದು ವಾರಾಣಸಿ ಅರ್ಥಾತ್ ಕಾಶಿಯಲ್ಲಿ. ಫೆಬ್ರವರಿ 20ರಂದು ಬೆಂಗಳೂರಿನಲ್ಲಿ ಮುಹೂರ್ತ ಮುಗಿಸಿಕೊಳ್ಳುವ ಚಿತ್ರತಂಡ ಮರುದಿನವೇ ಬನಾರಸ್‍ಗೆ ತೆರಳಲಿದ್ದು, ಅಲ್ಲಿ ಶಿವನ ಸನ್ನಿಧಿಯಲ್ಲಿ ಶಿವರಾತ್ರಿಯಂದೇ ಚಿತ್ರೀಕರಣಕ್ಕೆ ಓಂಕಾರ ಹಾಡಲಿದೆ.

Shivarjun Movie Gallery

KFCC 75Years Celebrations and Logo Launch Gallery