` ಬಂಡೀಪುರ ಕಾಡಿನಲ್ಲಿ ರಜನಿಕಾಂತ್ : ಮೋದಿ ಹಾದಿಯಲ್ಲಿ.. - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
rajinikanth returns to chennai after man vs wild shooting
Rajinikanth At Man Vs Wild Shooting

ಸೂಪರ್ ಸ್ಟಾರ್ ರಜನಿಕಾಂತ್ ಮೋದಿ ಹಾದಿಯಲ್ಲಿದ್ದಾರೆ. ಓಓಓಓ.. ರಾಜಕೀಯಕ್ಕೆ ಬಂದುಬಿಟ್ರಾ ಅನ್ನೋ ಪ್ರಶ್ನೆ ಬೇಡ. ಮೋದಿ ಕಳೆದ ವರ್ಷ ಮ್ಯಾನ್ ವರ್ಸಸ್ ವೈಲ್ಡ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ನೆನಪಿದೆ ತಾನೇ.. ಅದು ಬೇರ್‍ಗ್ರಿಲ್ಸ್ ಜೊತೆಗೆ. ಈಗ ಅದೇ ಕಾರ್ಯಕ್ರಮದ ಅತಿಥಿಯಾಗಿರೋದು ಸೂಪರ್ ಸ್ಟಾರ್ ರಜನಿಕಾಂತ್.

ಬಂಡೀಪುರ ಕಾಡಿನಲ್ಲಿ ಬೇರ್ ಗ್ರಿಲ್ಸ್ ರಜನಿಕಾಂತ್ ಅವರೊಂದಿಗೆ ಕಾರ್ಯಕ್ರಮ ಮಾಡಿದ್ದಾರೆ. ಕಾರ್ಯಕ್ರಮ ಚಿತ್ರೀಕರಣದ ನಡುವೆ ರಜನಿ ಅವರಿಗೆ ಲಂಟಾನಾ ಮುಳ್ಳು (ರೋಜಾನ್ ಮುಳ್ಳು) ತಗಲು ಸ್ವಲ್ಪ ತರಚಿದ ಗಾಯವಾಗಿದೆ. ಉಳಿದಂತೆ ಕಾರ್ಯಕ್ರಮ ಅದ್ಭುತವಾಗಿ ಮೂಡಿ ಬಂದಿದೆಯಂತೆ.

ರಜನಿಕಾಂತ್ ಇಡೀ ದಿನ ಶೂಟಿಂಗ್ ಮುಗಿಸಿ ವಾಪಸ್ ಚೆನ್ನೈಗೆ ತೆರಳಿದ್ದಾರೆ.