ಕಾಣದಂತೆ ಮಾಯವಾದನು ಚಿತ್ರದ ಹೀರೋ ವಿಕಾಸ್, ಮೂಲತಃ ಕಥೆಗಾರ. ಸ್ಕ್ರಿಪ್ಟ್ ವರ್ಕ್‍ನಲ್ಲಿ ಎತ್ತಿದ ಕೈ. ನಟನಾಗಿ, ಬರಹಗಾರನಾಗಿ, ಸಂಕಲನಕಾರನಾಗಿ, ನಿರ್ದೇಶಕನಾಗಿ ಗುರುತಿಸಿಕೊಂಡಿದ್ದ ವಿಕಾಸ್, ಈಗ ಕಾಣದಂತೆ ಮಾಯವಾದನು ಚಿತ್ರದ ಹೀರೋ ಆಗಿದ್ದಾರೆ.
ಅವರೇ ಹೇಳಿಕೊಳ್ಳೋ ಪ್ರಕಾರ ಈ ಚಿತ್ರದ ಕಥೆಯನ್ನು ರಾಜ್ ತಂದಾಗ ಕಥೆ ಇಷ್ಟವಾಗಿ ಅದನ್ನು ಡೆವಲಪ್ ಮಾಡಲು ಕುಳಿತುಕೊಂಡರಂತೆ. ಕೆಲವು ದಿನಗಳ ನಂತರ ರಾಜು ನೀವೇ ಹೀರೋ ಆಗಿ ಎಂದು ಹಠ ಹಿಡಿದಾಗ ಮೊದಲು ಒಪ್ಪಲಿಲ್ಲ. ಆದರೆ ನೀವು ಮಾಡದಿದ್ದರೆ ಕಥೆಯನ್ನು ಬೇರೆಯವರಿಗೆ ಕೊಡುತ್ತೇನೆ ಎಂದಾಗ ಒಪ್ಪಿಕೊಂಡೆ ಎನ್ನುವ ವಿಕಾಸ್‍ಗೆ ಈಗಲೂ ಬರವಣಿಗೆಯೇ ಇಷ್ಟ.
ಬರಹಗಾರನಾಗುವುದಕ್ಕೂ ಮೊದಲು ಎಡಿಟರ್ ಆಗಿದ್ದೆ. ಸಣ್ಣ ಪುಟ್ಟ ಪಾತ್ರಗಳಲ್ಲಿ ನಟಿಸಿದ್ದೆ. ಎಡಿಟರ್ ಆಗಿದ್ದಾಗ ಯೋಗರಾಜ್ ಭಟ್, ಸೂರಿ ಪರಿಚಯವಾದರು. ಜಾಕಿ ಚಿತ್ರದ ಡೈರೆಕ್ಷನ್ ಡಿಪಾರ್ಟ್‍ಮೆಂಟ್‍ನಲ್ಲಿ ಕೆಲಸ ಮಾಡಿದೆ. ಡ್ರಾಮಾಗೆ ಒನ್ ಲೈನ್ ಬರೆದೆ. ದೊಡ್ಮನೆ ಹುಡ್ಗ ಚಿತ್ರಕ್ಕೆ ಕಥೆ ಬರೆದೆ. ಸೂರಿ ಕ್ರೆಡಿಟ್ ಕೊಟ್ಟರು. ಅದಾದ ಮೇಲೆ ಜಯಮ್ಮನ ಮಗ ನಿರ್ದೇಶನ ಮಾಡಿದೆ. ಆದರೆ ಈಗಲೂ ನನಗೆ ಬರವಣಿಗೆಯೇ ಫೇವರಿಟ್ ಎನ್ನುತ್ತಾರೆ ವಿಕಾಸ್. ಸಿನಿಮಾ ಇದೇ ವಾರ ರಿಲೀಸ್ ಆಗುತ್ತಿದೆ.