` ಮತ್ತೊಮ್ಮೆ ಕಾಡು ಸೇರಿದ ದರ್ಶನ್ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
darshan's wild life photo shoot
Darshan

ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತೊಮ್ಮೆ ಕಾಡುಪಾಲಾಗಿದ್ದಾರೆ. ಬಂಡೀಪುರ, ನಾಗರಹೊಳೆ ಕಾಡು, ನಂತರ ದ.ಆಫ್ರಿಕಾದ ಸೆರೆಂಗಟ್ಟಿ ಕಾಡು ಸೇರಿದ್ದ ದರ್ಶನ್ ಈ ಬಾರಿ ಹೋಗಿರುವುದು ಉತ್ತರಾಖಂಡದ ಕಾಡಿಗೆ. ಉತ್ತರಾಖಂಡ್‍ನ ಸತ್ತಾಲ್ ಕಾಡು ಸೇರಿದ್ದಾರೆ.

ಸತ್ತಾಲ್ ಕಾಡು ಓಕ್ ಮತ್ತು ಪೈನ್ ಮರಗಳ ಕಾಡು. ಈ ಕಾಡಿನಲ್ಲಿ ಒಟ್ಟು 7 ಸರೋವರಗಳಿವೆ. ಈ ಚಳಿಗಾಲದಲ್ಲಿ ಸರೋವರಗಳಿಗೆ ದೇಶ ವಿದೇಶಗಳ ಪಕ್ಷಿಗಳು ಸಂತಾನೋತ್ಪತ್ತಿಗೆ ಬರುತ್ತವೆ. ಅವುಗಳನ್ನು ಸೆರೆ ಹಿಡಿಯುವ ಕನಸು ಹೊತ್ತು ಹೋಗಿದ್ದಾರೆ ದರ್ಶನ್. ದರ್ಶನ್ ಜೊತೆ ಖ್ಯಾತ ವನ್ಯಜೀವಿ ಫೋಟೋಗ್ರಾಫರ್ ಲೀಲಾ ಅಪ್ಪಾಜಿ, ರಾಹುಲ್ ಶರ್ಮ, ಶುಭಂ ಕುಮಾರ್ ಕೂಡಾ ಇದ್ದಾರೆ.

Shivarjun Movie Gallery

KFCC 75Years Celebrations and Logo Launch Gallery