ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಖಾಕಿ ಚಿತ್ರಕ್ಕೆ ಅಣ್ಣ ತಮ್ಮ ಇಬ್ಬರೂ ಒಟ್ಟೊಟ್ಟಿಗೇ ನೋಡಿದ್ದಾರೆ. ಚಿರಂಜೀವಿ ಸರ್ಜಾ, ತಾನ್ಯಾ ಹೋಪ್, ಶಿವಮಣಿ, ಛಾಯಾಸಿಂಗ್ ನಟಿಸಿರುವ ಖಾಕಿ ಚಿತ್ರ ಸಾಮಾನ್ಯ ಜನರೆಲ್ಲ ಒಟ್ಟಾಗಿ ಅನ್ಯಾಯವನ್ನು ಎದುರಿಸಿ ನಿಲ್ಲುವ ಕಥೆ ಹೊಂದಿದೆ. ನವೀನ್ ರೆಡ್ಡಿ ನಿರ್ದೇಶನದ ಚಿತ್ರಕ್ಕೆ ತರುಣ್ ಶಿವಪ್ಪ, ಮಾನಸ ತರುಣ್ ನಿರ್ಮಾಪಕರು. ಈ ಚಿತ್ರವನ್ನೀಗ ಸರ್ಜಾ ಸೋದರರು ಒಟ್ಟಿಗೇ ಚಿತ್ರಮಂದಿರದಲ್ಲಿ ಅಭಿಮಾನಿಗಳ ಜೊತೆ ವೀಕ್ಷಿಸಿದ್ದಾರೆ.
ನರ್ತಕಿಯಲ್ಲಿ ಚಿರಂಜೀವಿ ಸರ್ಜಾ ತಮ್ಮ ತಮ್ಮ ಧ್ರುವ ಸರ್ಜಾರ ಜೊತೆ ಬಂದು ವೀಕ್ಷಿಸಿದ್ದು ವಿಶೇಷ. ಅಣ್ಣನ ಆ್ಯಕ್ಷನ್, ಶಿವಮಣಿಯವರ ಘರ್ಜನೆ ಮೆಚ್ಚಿಕೊಂಡ ಧ್ರುವಾ ಚಿತ್ರವನ್ನು ನೋಡಿ, ಹರಸಿ ಹಾರೈಸಿ ಎಂದು ಮನವಿ ಮಾಡಿಕೊಂಡರು.