ಎದ್ದೇಳು ಎಂದೊಡನೆ ತಕ್ಷಣ ನೆನಪಾಗುವುದು ಎದ್ದೇಳು ಮಂಜುನಾಥ ಹಾಡು. ಮೊದಲನೆಯದ್ದು ಪಿಬಿಶ್ರೀಯವರ ಭಕ್ತಿಗೀತೆಯಾದರೆ ಮತ್ತೊಂದು ಗುರುಪ್ರಸಾದ್-ಜಗ್ಗೇಶರ ಕ್ವಾಟ್ಲೆ ಗೀತೆ. ಈಗ ಜಂಟಲ್‍ಮನ್ ಚಿತ್ರದ ಎದ್ದೇಳು ಭಾರತೀಯ ಹಾಡು ಬಂದಿದೆ.
ದಿನಕ್ಕೆ 18 ಗಂಟೆ ನಿದ್ದೆ ಮಾಡುವ ನಾಯಕನ್ನು ಎಚ್ಚರಿಸುವ ಗೀತೆ ಇದು. ಅಂದು ಸ್ವಾಮಿ ವಿವೇಕಾನಂದ ನಿದ್ರೆ ಮಾಡುತ್ತಿದ್ದ ಭಾರತೀಯರನ್ನು ಎಚ್ಚರಗೊಳಿಸಿದರು. ಇಲ್ಲಿ ಅದನ್ನು ಭಟ್ಟರು ಮಾಡಿದ್ದಾರೆ. 18 ಗಂಟೆಯ ನಿದ್ರೆ ಮಾಡಿದರೆ ಒಬ್ಬ ವ್ಯಕ್ತಿ ಏನೇನೆಲ್ಲ ಕಳೆದುಕೊಳ್ತಾನೆ ಅನ್ನೋದನ್ನು ಎದ್ದೇಳು ಭಾರತೀಯ ಹಾಡಿನಲ್ಲಿ ಸೊಗಸಾಗಿ ವಿವರಿಸಲಾಗಿದೆ.
ಟಗರು ಬಂತು ಟಗರು ಖ್ಯಾತಿಯ ಆಂಥೋನಿ ದಾಸನ್ ಈ ಹಾಡು ಹಾಡಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತದಲ್ಲಿ ಮೂಡಿ ಬಂದಿರುವ ಹಾಡು ಸೊಗಸಾಗಿದೆ.
ಜಡೇಶ್ ಕುಮಾರ್ ನಿರ್ದೇಶನದ ಚಿತ್ರಕ್ಕೆ ಗುರುದೇಶಪಾಂಡೆ ನಿರ್ಮಾಪಕ. ಪ್ರಜ್ವಲ್ ದೇವರಾಜ್ ಎದುರು ನಿಶ್ವಿಕಾ ನಾಯ್ಡು ನಾಯಕಿಯಾಗಿ ನಟಿಸಿದ್ದಾರೆ.