ರಚಿತಾ ರಾಮ್ ಜೊತೆ ಮದುವೆಯಂತೆ. ಆಂಧ್ರಪ್ರದೇಶದ ಕೋಟ್ಯಧಿಯೊಬ್ಬರ ಮಗಳ ಜೊತೆ ಎಂಗೇಜ್‍ಮೆಂಟ್ ಅಂತೆ. ಡಿಕೆ ಶಿವಕುಮಾರ್ ಕುಮಾರಸ್ವಾಮಿಯ ಬೀಗರಾಗ್ತಾರಂತೆ. ಇಂತಹ ಅಂತೆಕಂತೆಗಳಿಗೆಲ್ಲ ತೆರೆ ಬೀಳುವ ಸುದ್ದಿ ಹತ್ತಿರ ಬಂದಿದೆ. ನಿಖಿಲ್ ಮದುವೆಯಾಗುತ್ತಿರುವ ಹುಡುಗಿ ರೇವತಿ.
ಈ ರೇವತಿ ವಿಜಯನಗರ ಶಾಸಕ ಎಂ.ಕೃಷ್ಣಪ್ಪ ಅವರಿಗೆ ಮೊಮ್ಮಗಳಾಗಬೇಕು. ರೇವತಿ ಎಂಸಿಎ ಪದವೀಧರೆಯಾಗಿದ್ದು, ಮಲ್ಲತ್‍ಹಳ್ಳಿಯಲ್ಲಿ ವಧುವಿನ ಮನೆ ಇದೆ.
ವಧುವಿನ ಮನೆಗೆ ದೊಡ್ಡಗೌಡರು, ಚೆನ್ನಮ್ಮ, ಕುಮಾರಸ್ವಾಮಿ, ನಿಖಿಲ್, ದೇವೇಗೌಡರ ಮನೆಯ ಹೆಣ್ಣು ಮಕ್ಕಳು ಹೋಗಿ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಮೇ ತಿಂಗಳಲ್ಲಿ ಮದುವೆ ನಡೆಯುವ ಸಾಧ್ಯತೆ ಇದೆ. ಮೇ 17, 18ಕ್ಕೆ ಮದುವೆ ಫಿಕ್ಸ್ ಆಗುವ ಸಾಧ್ಯತೆಗಳಿವೆ.