ಚೆಗುವಾರಾ.. ಕ್ಯೂಬಾದ ಕ್ರಾಂತಿಕಾರಿ ನಾಯಕ. ಹೋರಾಟಗಾರ. ಇವತ್ತಿಗೂ ಎಷ್ಟೋ ಹೋರಾಟಗಾರರಿಗೆ ಸ್ಫೂರ್ತಿಯ ಸೆಲೆ. ಆತನ ಸ್ಫೂರ್ತಿ ಪಡೆದು ಹೋರಾಟಕ್ಕೆ ಧುಮುಕಿದ್ದಾರೆ ಚೇತನ್. ರಿಯಲ್ ಲೈಫಿನಲ್ಲೂ ಎಡಪಂಥೀಯ ಹೋರಾಟದಲ್ಲಿ ಗುರುತಿಸಿಕೊಂಡಿರುವ ಚೇತನ್, ರಣಂ ಚಿತ್ರದಲ್ಲಿ ಹೋರಾಟಗಾರನ ಪಾತ್ರದಲ್ಲಿಯೇ ನಟಿಸಿದ್ದಾರೆ.
ಆರ್. ಶ್ರೀನಿವಾಸ್ ನಿರ್ಮಾಣದ ಚಿತ್ರದಲ್ಲಿ ಚೇತನ್ ಹೋರಾಟಗಾರನಾದರೆ, ಎನ್‍ಕೌಂಟರ್ ಸ್ಪೆಷಲಿಸ್ಟ್ ಪಾತ್ರದಲ್ಲಿ ನಟಿಸಿರುವುದು ಚಿರಂಜೀವಿ ಸರ್ಜಾ. ನೀತುಗೌಡ, ವರಲಕ್ಷ್ಮಿ ಶರತ್ ಕುಮಾರ್, ದೇವ್‍ಗಿಲ್ ನಟಿಸಿರುವ ಚಿತ್ರಕ್ಕೆ ವಿ.ಸಮುದ್ರ ನಿರ್ದೇಶಕ.