ಡಿಂಗ, ಸಂಪೂರ್ಣವಾಗಿ ಐಫೋನ್‍ನಲ್ಲಿಯೇ ಶೂಟ್ ಆದ ಮೊತ್ತಮೊದಲ ಕನ್ನಡ ಸಿನಿಮಾ. ಒಂದು ಸಿನಿಮಾವನ್ನು ಐಫೋನ್‍ನಲ್ಲಿ ಶೂಟ್ ಮಾಡೋದು ಸಾಧ್ಯನಾ..? ಆ ಸಿನಿಮಾ ಕ್ವಾಲಿಟಿ ಹೇಗಿರಬಹುದು..? ಏನೋ.. ಡಿಜಿಟಲ್ ಹೆಚ್‍ಡಿ ಕ್ವಾಲಿಟಿ ಫೋಟೋ ಸಿಗುತ್ತೆ ಓಕೆ. ಹಾಗಂತ ಅದರಲ್ಲಿ ಸಿನಿಮಾ ಮಾಡ್ತಾರಾ..? ಇಂತಹ ಪ್ರಶ್ನೆಗಳಿಗೆಲ್ಲ ಡಿಂಗ ಚಿತ್ರದ ಟ್ರೇಲರ್, ಹಾಡುಗಳಲ್ಲೇ ಉತ್ತರವಿದೆ.
ಯಾವುದೇ ಹೈಫೈ ಸಿನಿಮಾಗೂ ಕಮ್ಮಿಯಿಲ್ಲದಂತೆ ಒಳ್ಳೆಯ ಕ್ವಾಲಿಟಿ ಎಂದು ಸಾರಿ ಹೇಳ್ತಿವೆ ಟ್ರೇಲರ್, ಹಾಡುಗಳು. ಅಭಿಷೇಕ್ ಜೈನ್ ನಿರ್ದೇಶನದ ಚಿತ್ರಕ್ಕೆ ಮಾಯಕಾರ್ ಪ್ರೊಡಕ್ಷನ್ಸ್ ಮೂಲಕ 11 ಜನ ನಿರ್ಮಾಪಕರು ಬಂಡವಾಳ ಹೂಡಿದ್ದಾರೆ.
ಡಿಂಗ ಅನ್ನೋದು ಪಗ್ ಜಾತಿಯ ಒಂದು ನಾಯಿ. ಆ ನಾಯಿಯೇ ಚಿತ್ರದ ಟೈಟಲ್. ಐಫೋನ್‍ಗೆ ಕ್ಯಾಮೆರಾ ಲೆನ್ಸ್ ಫಿಕ್ಸ್ ಮಾಡಿ ಶೂಟ್ ಮಾಡಿದ್ದು, ಸಿನಿಮಾ ಕಂಪ್ಲೀಟ್ ಕಾಮಿಡಿಮಯ. ಎಮೋಷನ್ಸ್ ಕೂಡಾ ಹಾಗೆಯೇ ಇವೆ. ಆರವ್ ಗೌಡ, ಅನುಷಾ ಪ್ರಮುಖ ಪಾತ್ರಧಾರಿಗಳು. ಮೂಗೂರು ಮಧು ದೀಕ್ಷಿತ್ ಪ್ರಧಾನ ನಿರ್ಮಾಪಕರಾಗಿದ್ದಾರೆ.