ಬೆಂಕಿಯಲ್ಲಿ ಅರಳಿದ ಹೂವು ಎಂದರೆ ಸುಹಾಸಿನಿಯ ಮುಖ ಕಣ್ಣ ಮುಂದೆ ಬರುತ್ತದೆ. ಕನ್ನಡದ ಕ್ಲಾಸಿಕ್ ಚಿತ್ರಗಳಲ್ಲೊಂದು ಬೆಂಕಿಯಲ್ಲಿ ಅರಳಿದ ಹೂವು. ಆದರೆ ಇನ್ನು ಮುಂದೆ ಬೆಂಕಿಯಲ್ಲಿ ಅರಳಿದ ಹೂವು ಎಂದರೆ ಅನುಪಮಾ ಗೌಡರನ್ನು ನೆನಪಿಸಿಕೊಳ್ಳಬೇಕು.
ಆ ಕರಾಳ ರಾತ್ರಿ, ತ್ರಯಂಬಕಂ, ಪುಟ 109 ಮೊದಲಾದ ಚಿತ್ರಗಳಲ್ಲಿ ಗಮನ ಸೆಳೆದ ಅನುಪಮಾ ಗೌಡ ಈಗ ಬೆಂಕಿಯಲ್ಲಿ ಅರಳಿದ ಹೂವಾಗಿದ್ದಾರೆ. ದೇವಿ ಶ್ರೀಪ್ರಸಾದ್ ನಿರ್ದೇಶನದ ಈ ಚಿತ್ರದಲ್ಲಿ ಸೋಮಾರಿ ಗಂಡನ ಜೊತೆಗೆ ಏಗುವ ಪಾತ್ರ ಅನುಪಮಾರದ್ದು. ವಿಶು ಆಚಾರ್ ನಿರ್ಮಾಪಕ.
ಬೆಂಕಿಯಲ್ಲಿ ಅರಳಿದ ಹೂವು ಎಂದರೆ ಸುಹಾಸಿನಿಯೇ ನೆನಪಾಗುವ ಹೊತ್ತಿನಲ್ಲಿ, ಸುಹಾಸಿನಿಯವರನ್ನೂ ಮೀರಿಸುವ ಅಭಿನಯ ನೀಡಬೇಕಾದ ಸವಾಲು ಅನುಪಮಾ ಎದುರು ಇದೆ.