` ಹಾರರ್ ಅಲ್ಲ.. ಕಾಣದಂತೆ ಮಾಯವಾದ ಆತ್ಮದ ಸೇಡು - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
kanadanthe mayavadhano is a ghost revenge story
Kanadanthe Mayavadhano Movie Image

ಕಾಣದಂತೆ ಮಾಯವಾದನು ಚಿತ್ರದ ಕಥೆ ಏನು..? ಅದು ಆತ್ಮದ ಕಥೆ. ಚಿತ್ರದ ನಾಯಕ ರಮ್ಮಿ. ನಾಯಕಿ ವಂದನಾಳನ್ನು ಮತ್ತೆ ಭೇಟಿಯಾಗೋದಾಗಿ ಹೇಳಿ ಹೋಗ್ತಾನೆ. ಆದರೆ ಹಾಗೆ ಹೋದವನನ್ನು ವಿಲನ್‍ಗಳು ಕೊಲ್ತಾರೆ. ಮತ್ತೆ ಸಿಗೋದಾಗಿ ಹೇಳಿ ಹೋಗಿ ನಾಪತ್ತೆಯಾಗುವ ಕಾರಣಕ್ಕೇ ಚಿತ್ರಕ್ಕೆ ಕಾಣದಂತೆ ಮಾಯವಾದನು ಅನ್ನೋ ಟೈಟಲ್ ಎಂದು ಕಥೆಯ ಗುಟ್ಟು ಬಿಚ್ಚಿಡ್ತಾರೆ ನಾಯಕ ವಿಕಾಸ್.

ವಿಕಾಸ್ ನಟನಾಗಿಯೇ ಚಿತ್ರರಂಗಕ್ಕೆ ಬಂದವರು. ಕಾದಂಬರಿ ಸೀರಿಯಲ್ಲಿನಲ್ಲಿ, ನಂದಿ ಸೇರಿದಂತೆ ಹಲವು ಚಿತ್ರಗಳಲ್ಲಿ ಕ್ಯಾರೆಕ್ಟರ್ ರೋಲ್‍ಗಳಲ್ಲಿ ನಟಿಸಿದ್ದವರು. ಆದರೆ, ಇಷ್ಟವಿದ್ದುದು ಸ್ಕ್ರಿಪ್ಟ್ ರೈಟಿಂಗ್‍ನಲ್ಲಿ. ಯೋಗರಾಜ್ ಭಟ್ಟರ ಜೊತೆ ಹಲವು ಚಿತ್ರಗಳಲ್ಲಿ ಪಳಗಿದ ವಿಕಾಸ್, ಜಯಮ್ಮನ ಮಗ ಚಿತ್ರ ನಿರ್ದೇಶಿಸಿ ಗೆದ್ದರು.

ವಿಕಾಸ್ ಎದುರು ಇಲ್ಲಿ ಸಿಂಧು ಲೋಕನಾಥ್ ನಾಯಕಿಯಾಗಿದ್ದಾರೆ. ಗೆಳೆಯನೇ ಆದ ರಾಜು ಪತ್ತಿಪಾಟಿ ನಿರ್ದೇಶಕ.

Sagutha Doora Doora Movie Gallery

Popcorn Monkey Tiger Movie Gallery