ಮಾಸ್ತಿಗುಡಿ ಚಿತ್ರದ ಶೂಟಿಂಗ್ ವೇಳೆ ದುರಂತ ಸಾವಿಗೀಡಾದ ಉದಯ್ ಅಭಿನಯದ ಕೊನೆ ಚಿತ್ರ ಯಾವುದಿರಬಹುದು..? ಅನುಮಾನವೇ ಬೇಡ. ಅದು ಕಾಣದಂತೆ ಮಾಯವಾದನು. ಜನವರಿ 31ಕ್ಕೆ ರಿಲೀಸ್ ಆಗುತ್ತಿರುವ ಈ ಚಿತ್ರದಲ್ಲಿ ಉದಯ್ ಕಾಣದಂತೆ ಮಾಯವಾದನು ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿದ್ದರು. ಉದಯ್ ಅಕಾಲ ಮರಣಕ್ಕೀಡಾದಾಗ ಕಾಣದಂತೆ ಮಾಯವಾದನು ಚಿತ್ರದ ಶೂಟಿಂಗ್ ಇನ್ನೂ ಶೇ.20ರಷ್ಟು ಬಾಕಿಯಿತ್ತು.
ಹಾಗಾದರೆ ಉದಯ್ ಪಾತ್ರವನ್ನು ಮತ್ತೊಬ್ಬರಿಂದ ಮಾಡಿಸಲಾಯಿತೇ.. ಇಲ್ಲ. ಹಾಗೆ ಮಾಡದೆ ಆ ಪಾತ್ರವನ್ನು ಭಜರಂಗಿ ಲೋಕಿ ಕ್ಯಾರಿ ಮಾಡಿದ್ದಾರೆ. ಸೀರಿಯಲ್ಗಳಲ್ಲಿ ಪಾತ್ರಧಾರಿ ಬದಲಾದಂತೆ ಚಿತ್ರದಲ್ಲಿ ಉದಯ್ ಪಾತ್ರಕ್ಕೆ ಭಜರಂಗಿ ಲೋಕಿ ಎಂಟ್ರಿ ಕೊಟ್ಟಿದ್ದಾರೆ. ಎಲ್ಲಿಯೂ ಅದು ಡಿಸ್ಟರ್ಬೆನ್ಸ್ ಅನ್ನಿಸಲ್ಲ ಎನ್ನುತ್ತಾರೆ ಚಿತ್ರದ ಹೀರೋ ವಿಕಾಸ್.
ಅಂದಹಾಗೆ ಉದಯ್ಗೆ ಜನಪ್ರಿಯತೆ ತಂದುಕೊಟ್ಟ ಜಯಮ್ಮನ ಮಗ ಚಿತ್ರಕ್ಕೆ ವಿಕಾಸ್ ಅವರೇ ನಿರ್ದೇಶಕ. ಅವರು ಹೀರೋ ಆಗಿರುವ ಮೊದಲ ಚಿತ್ರ ಕಾಣದಂತೆ ಮಾಯವಾದನು ಜನವರಿ ಕೊನೆಗೆ ಬರುತ್ತಿದೆ. ಸಿಂಧು ಲೋಕನಾಥ್ ಹೀರೋಯಿನ್.