ಒಂದೇ ಚಿತ್ರದಲ್ಲಿ 10 ಪಾತ್ರಗಳಲ್ಲಿ ನಟಿಸಿರುವ ಕಮಲ್ಹಾಸನ್ ಚಿತ್ರ ದಶಾವತಾರಂ ನೋಡಿದ್ದೀರಿ. 9 ಪಾತ್ರಗಳಲ್ಲಿ ನಟಿಸಿರುವ ಜಗ್ಗೇಶ್ ಅವರ ಈಶ್ವರ್ ನೋಡಿದ್ದೀರಿ. ಇದು ಅದನ್ನೂ ಮೀರಿಸಿದ ದಾಖಲೆ, ಒಂದೇ ಚಿತ್ರದಲ್ಲಿ 17 ಪಾತ್ರ. ಈ ದಾಖಲೆ ಬರೆಯುತ್ತಿರುವುದು ಸಾಧು ಕೋಕಿಲ.
ಮುಗಿಲ್ ಪೇಟೆ ಚಿತ್ರದಲ್ಲಿ ಸಾಧು ಈ ದಾಖಲೆ ಬರೆಯುತ್ತಿದ್ದಾರೆ. ಇದು ಲಿಮ್ಕಾ ದಾಖಲೆ ಪುಟಗಳನ್ನು ಸೇರಲಿದೆ. ಸದ್ಯಕ್ಕೆ ಈ ದಾಖಲೆ ಕನ್ನಡದವರೇ ಆದ ಹರೀಶ್ ರಾಜ್ ಹೆಸರಲ್ಲಿದೆ. ಹರೀಶ್ ರಾಜ್ ತಮ್ಮದೇ ನಿರ್ದೇಶನ, ನಿರ್ಮಾಣದ ಶ್ರೀ ಸತ್ಯನಾರಾಯಣ ಚಿತ್ರದಲ್ಲಿ 16 ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು.
ಮುಗಿಲ್ಪೇಟೆ ಚಿತ್ರಕ್ಕೆ ಭರತ್ ನಿರ್ದೇಶಕ. ಮನುರಂಜನ್ ರವಿಚಂದ್ರನ್ ಮತ್ತು ಖಯಾದು ಲೋಹರ್ ನಟಿಸಿರುವ ಚಿತ್ರಕ್ಕೆ ರಕ್ಷಾ ವಿಜಯ್ಕುಮಾರ್ ನಿರ್ಮಾಪಕರು.