ಐಫೋನ್‍ನಲ್ಲಿಯೇ ಚಿತ್ರೀಕರಣವಾದ ಮೊದಲ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಡಿಂಗ ಇದೇ ಜನವರಿ ಅಂತ್ಯಕ್ಕೆ ತೆರೆ ಮೇಲೆ ಪ್ರತ್ಯಕ್ಷವಾಗಲಿದ್ದಾನೆ. ಐ ಲವ್ ಯು, ದರ್ಬಾರ್ ಚಿತ್ರಗಳನ್ನು ವಿತರಣೆ ಮಾಡಿದ್ದ ಧೀರಜ್ ಎಂಟರ್‍ಪ್ರೈಸಸ್ ಡಿಂಗ ಚಿತ್ರವನ್ನು ರಿಲೀಸ್ ಮಾಡುತ್ತಿದೆ. ಚಿತ್ರ ಜನವರಿ 31ರಂದು ತೆರೆ ಮೇಲೆ ಬರುತ್ತಿದೆ.
ಅಭಿಷೇಕ್ ಜೈನ್ ನಿರ್ದೇಶನದ ಚಿತ್ರದಲ್ಲಿ ನಾಯಕ ಕ್ಯಾನ್ಸರ್ ರೋಗಿ. ಸಾವು ಖಚಿತ ಎಂದು ಗೊತ್ತಾದ ಮೇಲೆ ತನ್ನ ಪ್ರೀತಿಯ ನಾಯಿಯನ್ನು ತನ್ನಷ್ಟೇ ಪ್ರೀತಿಸುವ ವ್ಯಕ್ತಿಗೆ ಕೊಟ್ಟು ಸಾಯಲು ಹೊರಡುತ್ತಾನೆ. ನಾಯಿಯನ್ನು ಸಾಕುವವರನ್ನು ಪರೀಕ್ಷೆಗೆ ಒಳಪಡಿಸುತ್ತಾನೆ. ಆಗ ಸೃಷ್ಟಿಯಾಗುವ ಭಾವನೆಗಳ ಮೆರವಣಿಗೆಯೇ ಚಿತ್ರದ ಕತೆ.
ಆರವ್, ಅನುಷಾ ನಟಿಸಿರುವ ಚಿತ್ರದಲ್ಲಿ 100% ಮನರಂಜನೆ ಇದೆ. ಜೊತೆಗೊಂದು ಅತ್ಯುತ್ತಮ ಸಂದೇಶವೂ ಇದೆ ಎನ್ನುತ್ತಾರೆ ನಿರ್ದೇಶಕ ಅಭಿಷೇಕ್ ಜೈನ್.