ಭಾರತದಲ್ಲೇ ಐ ಫೋನ್‍ನಲ್ಲಿ ಶೂಟ್ ಆದ ಮೊದಲ ಸಿನಿಮಾ ಎಂಬ ದಾಖಲೆ ಬರೆದಿರುವ ಚಿತ್ರ ಡಿಂಗ. ಶೀಘ್ರದಲ್ಲೇ ರಿಲೀಸ್ ಆಗುತ್ತಿರುವ ಡಿಂಗ ಚಿತ್ರದ ಹಾಡು ಟಿಕ್‍ಟಾಕ್‍ನಲಿ ಭರ್ಜರಿ ಸೌಂಡ್ ಮಾಡ್ತಿದೆ. ಡಿಂಗ ಡ್ಯಾನ್ಸ್ ಈಗ ಟಿಕ್‍ಟಾಕ್ ಟ್ರೆಂಡ್.
ಅವನೇ ಶ್ರೀಮನ್ನಾರಾಯಣದ ಹ್ಯಾಂಡ್ಸಪ್ ಸಾಂಗ್ ಇಂತಾದ್ದೊಂದು ಕ್ರೇಜ್ ಸೃಷ್ಟಿಸಿತ್ತು. ಈಗ ಡಿಂಗನ ಸರದಿ.
ಅಭಿಷೇಕ್ ಜೈನ್ ನಿರ್ದೇಶನದ ಚಿತ್ರದಲ್ಲಿ ಆರವ್ ಗೌಡ, ಅನುಷಾ ನಾಯಕ ನಾಯಕಿಯರು. ಇಡೀ ಚಿತ್ರದ ಕಥೆ ನಾಯಿಯೊಂದರ ಸುತ್ತ ನಡೆಯುತ್ತೆ. ಕ್ಯಾನ್ಸರ್‍ನಿಂದ ಬಳಲುವ ರೋಗಿಯೊಬ್ಬ, ಸಾಯುವುದಕ್ಕೂ ಮುನ್ನ ತನ್ನ ನಾಯಿಯನ್ನು ತನ್ನಷ್ಟೇ ಪ್ರೀತಿಸುವ ವ್ಯಕ್ತಿಗೆ ಕೊಡಲು ಹೊರಡುತ್ತಾನೆ. ಆಗ ಆತ ಎದುರಿಸುವ ವಿಭಿನ್ನ ವ್ಯಕ್ತಿಗಳ ಜೊತೆಗಿನ ಪಯಣವೇ ಚಿತ್ರದ ಕಥೆ.