` ಕಿಚ್ಚ ಸುದೀಪ್‍ಗೆ ದಾದಾ ಸಾಹೇಬ್ ಫಾಲ್ಕೆ ಅವಾರ್ಡ್ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
sudeep bags prestigious dada saheb phalke award
Kiccha Sudeepa

ಕಿಚ್ಚ ಸುದೀಪ್ ಮತ್ತೊಂದು ದೊಡ್ಡ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ದಾದಾ ಸಾಹೇಬ್ ಫಾಲ್ಕೆ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ದಬಾಂಗ್ 3 ಚಿತ್ರದ ನಟನೆಗಾಗಿ ದೆಹಲಿಯ ದಾದಾ ಸಾಹೇಬ್ ಫಾಲ್ಕೆ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಪ್ರಶಸ್ತಿ ಆಯ್ಕೆ ಸಮಿತಿ ಸುದೀಪ್ ಅವರನ್ನು ಆಯ್ಕೆ ನೇಮಕ ಮಾಡಿದೆ.

ಇದು ಕೇಂದ್ರ ಸರ್ಕಾರ ನೀಡುವ ಪ್ರಶಸ್ತಿಯಲ್ಲ. ಚಲನಚಿತ್ರರಂಗದ ಗಣ್ಯರು, ತಜ್ಞರು, ಬರಹಗಾರರು ಹುಟ್ಟು ಹಾಕಿರುವ ಪ್ರಶಸ್ತಿ. ಹೀಗಾಗಿ ಈ ಪ್ರಶಸ್ತಿಗೆ ಬೇರೆಯದೇ ಆದ ಗೌರವ, ಮನ್ನಣೆ ಇದೆ. ಈ ಸಮಿತಿ ಪ್ರತಿ ವರ್ಷ 10 ವಿಭಾಗಗಳಲ್ಲಿ ಪ್ರಶಸ್ತಿ ನೀಡುತ್ತದೆ. ಈ ಬಾರಿ ಸುದೀಪ್ ಬಲ್ಲಿಸಿಂಗ್ ಪಾತ್ರದ ಅಭಿನಯಕ್ಕಾಗಿ ಪ್ರಶಸ್ತಿ ಪಡೆಯುತ್ತಿದ್ದು, ಫೆಬ್ರವರಿ 20ರಂದು ಮುಂಬೈನಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.

Sagutha Doora Doora Movie Gallery

Popcorn Monkey Tiger Movie Gallery