ಕಾಣದಂತೆ ಮಾಯವಾದನು ಚಿತ್ರ ಬಹಳ ಕುತೂಹಲ ಕೆರಳಿಸಿಬಿಟ್ಟಿದೆ. ಏಕೆಂದರೆ ಚಿತ್ರದಲ್ಲಿರೋದು ದೆವ್ವದ ಕಥೆ. ಲವ್ ಸ್ಟೋರಿ. ಕ್ರೈಂ ಥ್ರಿಲ್ಲರ್. ಆದರೆ, ಎಲ್ಲವೂ ಕಾಮಿಡಿ. ಹಾಗಾದರೆ, ಸ್ಟೋರಿ ಲೈನ್ ಏನಿರಬಹುದು..?
ನಾನಿಲ್ಲಿ ಐಟಿ ಹುಡುಗಿ. ವಿಕಾಸ್‍ನನ್ನು ಲವ್ ಮಾಡುತ್ತೇನೆ. ಪ್ರೀತಿಯಲ್ಲಿರುವಾಗಲೇ ಅವನು ನಾಪತ್ತೆಯಾಗಿಬಿಡುತ್ತಾನೆ. ಅವನನ್ನು ಹುಡುಕುತ್ತಾ ಹೊರಡುತ್ತೇನೆ. ಆಗ ನನಗೊಂದು ಆತ್ಮ ಜೊತೆಯಾಗುತ್ತೆ. ಅದು ಶಕ್ತಿಯಿಲ್ಲದ ದೆವ್ವ. ಬದುಕಿದ್ದಾಗ ಬೇಕಾದಷ್ಟು ತಪ್ಪು ಮಾಡಿ, ಸತ್ತ ಮೇಲೆ ಮಾಡಿದ ತಪ್ಪುಗಳು ಅರಿವಾಗಿ ಪಶ್ಚಾತ್ತಾಪ ಪಡುವ ದೆವ್ವ. ಆ ದೆವ್ವ ಪ್ರವೇಶಿಸೋದು ಧರ್ಮಣ್ಣನ ಮೇಲೆ. ಧರ್ಮಣ್ಣಗೆ ದೆವ್ವ ಅಂದ್ರೆ ಭಯ. ಆದರೆ, ಧರ್ಮಣ್ಣನ ದೇಹದಲ್ಲಷ್ಟೇ ಆತ್ಮಕ್ಕೆ ಶಕ್ತಿ. ಹೀಗೆ ಕಥೆ ಸಖತ್ ಕಾಮಿಡಿಯಾಗಿ ಸಾಗುತ್ತೆ' ಎಂದು ಕಥೆಯ ಎಳೆಯನ್ನೇ ಬಿಚ್ಚಿಡ್ತಾರೆ ಸಿಂಧು ಲೋಕನಾಥ್.
ಒಟ್ಟಿನಲ್ಲಿ ಕೆಲವೇ ದಿನಗಳಲ್ಲಿ ತೆರೆಯ ಮೇಲೆ ದೆವ್ವ ಬರಲಿದೆ. ಥ್ರಿಲ್ ಕೊಡಲಿದೆ. ನಕ್ಕು ನಗಿಸಲಿದೆ. ಭಯವನ್ನೂ ಹುಟ್ಟಿಸಲಿದೆ. ಎಂಜಾಯ್....