ಮಾಯಾಬಜಾರ್ ಚಿತ್ರದಲ್ಲಿ ಎಸ್‍ಪಿಬಿ ಹಾಡಿದ ಹಾಡು ವೈರಲ್ ಆಗೋಕೆ ಶುರುವಾಗಿದೆ. ಕಾರಣ ಇಷ್ಟೆ, ಹಾಡಿನಲ್ಲಿರೋ ಸಾಹಿತ್ಯ. ತಾರಾತಿಗಡಿ.. ಪಾತಾಳ್‍ಗರಡಿ.. ಥಳಕ್ಕು ಬಳುಕು.. ಬೆಳ್ಳಂ ಬೆಳಕು.. ಲಕಲಕಲಕಲಕ.. ಲೋಕ ನಮ್ದು ಮಾಯಾಬಜಾರು.. ಬಣ್ಣದ ಬಾಳು ಬೆಣ್ಣೆ ಮಾತು.. ನೀರಿನ ಮ್ಯಾಲೆ ದೋಣಿ ತೂತು.. ಸುಳ್ಳಿನ ಸಂತೆಯಲಿ ಸತ್ಯ ಢುಮ್ಕಿ ಢಮಾರು..
ಭಗವಂತಂಗೆ ಕೆಳಗೆ ಕರೆದು ಬುದ್ದಿ ಹೇಳಣ.. ನಾಳೆಯಿಂದ ನಾವೇ ದೇವರಾಗಿಬಿಡೋಣ.. ಯಾವುದು ಹೆಂಗಾರ ಹಾಳಾಗೋಗ್ಲಿ.. ಕಾಸು ಮಾಡಣ..
ಎಂದು ಸಾಗುವ ಸಾಹಿತ್ಯ. ಥೇಟು ಭಟ್ಟರ ಶೈಲಿ. ಯೋಗರಾಜ್ ಭಟ್ಟರ ಹಾಡಿಗೆ ಮ್ಯೂಸಿಕ್ಕು ಕೊಟ್ಟಿರೋದು ಮಿಧುನ್ ಮುಕುಂದನ್. ಎಸ್‍ಪಿಬಿ ಹಾಡಿರೋ ಹಾಡಿಗೆ ಸ್ಟೆಪ್ಪು ಹಾಕಿದ್ದಾರೆ ಪುನೀತ್. ನಿರ್ಮಾಣವೂ ಅವರದ್ದೇ. ತಮ್ಮದೇ ನಿರ್ಮಾಣದ ಚಿತ್ರದಲ್ಲಿ ಇದೇ ಮೊದಲ ಬಾರಿಗೆ ಅಪ್ಪು ಕಾಣಿಸಿಕೊಳ್ತಿದ್ದಾರೆ. ಚಿತ್ರದಲ್ಲಿ ರಾಜ್ ಬಿ.ಶೆಟ್ಟಿ. ಅಚ್ಯುತ್ ಕುಮಾರ್, ಪ್ರಕಾಶ್ ರೈ, ವಸಿಷ್ಠ ಸಿಂಹ, ಸುಧಾರಾಣಿ, ಚೈತ್ರಾ ರಾವ್, ಸಾಧು ಕೋಕಿಲ ಮೊದಲಾದವರು ನಟಿಸಿದ್ದಾರೆ