ಪುನೀತ್ ರಾಜ್ಕುಮಾರ್ ಅಭಿನಯದ ಜೇಮ್ಸ್ ಚಿತ್ರಕ್ಕೆ ಮುಹೂರ್ತ ನೆರವೇರಿದೆ. ಬಹುದ್ದೂರ್ ಚೇತನ್ ನಿರ್ದೇಶನದ ಚಿತ್ರವಿದು. ಸುಮಾರು 4 ವರ್ಷಗಳ ಹಿಂದೆಯೇ ಅನೌನ್ಸ್ ಆಗಿದ್ದ ಚಿತ್ರ ಇಷ್ಟು ತಡವಾಗಿದ್ದೇಕೆ..? ಕಾರಣ ಕಮಿಟ್ಮೆಂಟ್ಸ್.
ಜೇಮ್ಸ್ ಚಿತ್ರಕ್ಕೆ ಬುನಾದಿ ಬಿದ್ದಿದ್ದು ಬಹದ್ದೂರ್ ಚಿತ್ರದಲ್ಲಿ. ಆ ಚಿತ್ರಕ್ಕೆ ಪುನೀತ್ ಹಿನ್ನೆಲೆ ಧ್ವನಿ ಕೊಟ್ಟಿದ್ದರು. ಆಗ ಪುನೀತ್ ಅವರಿಗೆ ಕಥೆ ಹೇಳಿದ್ದೆ. ಔಟ್ ಆಫ್ ದಿ ಬಾಕ್ಸ್ ಸ್ಟೋರಿ. ಅವರಿಗೂ ಇಷ್ಟವಾಗಿತ್ತು. ಆದರೆ,ನಡುವೆ ಬೇರೆ ಏನೇನೋ ಕಮಿಟ್ಮೆಂಟ್ಸ್ ಬಂದ ಕಾರಣ, ಮುಂದೆ ಹೋಗುತ್ತಲೇ ಹೋಯ್ತು ಎಂದಿದ್ದಾರೆ ಚೇತನ್.
ಅಂದಹಾಗೆ ಇದು ಪುನೀತ್ ಅಭಿನಯದ 30ನೇ ಸಿನಿಮಾ. ಮಾರ್ಚ್ 17ಕ್ಕೆ ಪುನೀತ್ ಹುಟ್ಟುಹಬ್ಬವಿದ್ದು, ಆ ದಿನ ಟೀಸರ್ ಕೊಡ್ತಾರಂತೆ ಚೇತನ್. ಚಿತ್ರಕ್ಕೆ ಚೇತನ್ ಅವರ ಸ್ನೇಹಿತ ಶೇಖರ್ ನಿರ್ಮಾಪಕರು.
ಅಪ್ಪ ಅಮ್ಮ ಹೆಸರಿಟ್ಟರೆ ವಾಡಿಕೆ, ನಮಗೆ ನಾವೇ ಹೆಸರಿಟ್ಕೊಂಡ್ರೆ ಅದು ಬೇಡಿಕೆ ಅನ್ನೋ ಡೈಲಾಗ್ ಮೂಲಕ ಜೇಮ್ಸ್ ಶುರುವಾಗಿದೆ. ಕ್ಲಾಪ್ ಮಾಡಿರೋದು ಅಶ್ವಿನಿ ಪುನೀತ್ ರಾಜ್ಕುಮಾರ್.