ಜೋಡೆತ್ತು ಎಂದರೆ ತಕ್ಷಣ ಕಣ್ಣ ಮುಂದೆ ಬರೋದು ದರ್ಶನ್ ಮತ್ತು ಯಶ್. ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಇಬ್ಬರಿಗೂ ಸಿಕ್ಕ ಬಿರುದು ಇದು. ಈಗ ಈ ಇಬ್ಬರೂ ಒಂದು ಜನ ಮೆಚ್ಚುಗೆಯ ಕೆಲಸ ಮಾಡುತ್ತಿದ್ದಾರೆ.
ಮಂಡ್ಯ ಜಿಲ್ಲೆಯ ಪಾಂಡವಪುರದಲ್ಲಿ ಚೈತ್ರ ಗೋಶಾಲೆಯಿದೆ. ಆ ಗೋಶಾಲೆಗೆ ಯಶ್ ಕಟ್ಟಡ ಕಟ್ಟಿಸಿಕೊಡುವ ಭರವಸೆ ಕೊಟ್ಟಿದ್ದರು. ಕಟ್ಟಡ ನಿರ್ಮಾಣದ ಕೆಲಸ ಶುರುವಾಗಿದೆ.
ಇತ್ತ ದರ್ಶನ್ ಗೋಶಾಲೆಗೆ ಬೇಕಾದ ಹುಲ್ಲನ್ನು ಟ್ರಕ್ಕು, ಟ್ರ್ಯಾಕ್ಟರುಗಳಲ್ಲಿ ತರಿಸಿಕೊಟ್ಟಿದ್ದಾರೆ. ಹಸುಗಳ ಬಗ್ಗೆ ಸದಾ ವಿಶೇಷ ಕಾಳಜಿ ವಹಿಸುವ ದರ್ಶನ್, ಗೋಶಾಲೆಗೆ ನೆರವು ನೀಡಲು ಟೊಂಕ ಕಟ್ಟಿದ್ದಾರೆ. ಇಬ್ಬರೂ ಕೊಟ್ಟ ಮಾತು ಉಳಿಸಿಕೊಂಡಿದ್ದಾರೆ.