` ಭಜರಂಗಿ 2 ಸೆಟ್ನಲ್ಲಿ ಮತ್ತೆ ಅನಾಹುತ..! - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
Fire at bhajarangi 2
Shivarajkumar in bhajarangi 2 movie

ಭಜರಂಗಿ 2 ಸೆಟ್ನಲ್ಲಿ ಮತ್ತೆ ಅನಾಹುತ..!

 

ಭಜರಂಗಿ 2 ಚಿತ್ರದ ಮೇಲೆ ಅದ್ಯಾರ ಕಣ್ಣು ಬಿದ್ದಿದೆಯೋ ಗೊತ್ತಿಲ್ಲ. ಪದೇ ಪದೇ ಅನಾಹುತಗಳಾಗುತ್ತಿವೆ. ಒಂದೇ ವಾರದಲ್ಲಿ 3 ಅನಾಹುತ. ಈಗ ಮತ್ತೊಮ್ಮೆ ದುರಂತ ಸಂಭವಿಸಿದೆ. ಮೂರು ದಿನಗಳ ಹಿಂದೆಯಷ್ಟೇ ಸೆಟ್ಗೆ ಬೆಂಕಿ ಬಿದ್ದಿತ್ತು. ಅದೃಷ್ಟವಶಾತ್ ಯಾರಿಗೂ ಅಪಾಯವಾಗಿರಲಿಲ್ಲ. ಆಗ ಸ್ವತಃ ಶಿವರಾಜ್ ಕುಮಾರ್ ಸೇರಿದಂತೆ 100ಕ್ಕೂ ಹೆಚ್ಚು ಜನ ಸೆಟ್ನಲ್ಲಿದ್ದರು. ಆಂಜನೇಯನೇ ಎಲ್ಲರನ್ನೂ ಕಾಪಾಡಿದ ಎಂದು ಭಗವಂತನನ್ನು ಸ್ಮರಿಸಿದ್ದರು ಶಿವಣ್ಣ.

ಅದಾದ ಮೇಲೆ ಬಸ್ಸಿನ ಮೇಲೆ ಲೈಟ್ ಕಂಬವೊಂದು ಬಿದ್ದು ಅನಾಹುತವಾಗಿತ್ತು. ಒನ್ಸ್ ಎಗೇಯ್ನ್ ಎಲ್ಲರೂ ಬಚಾವ್ ಆಗಿದ್ದರು.

ಈಗ 3ನೇ ಬಾರಿ, ಬೆಂಕಿ ಅನಾಹುತ ಸಂಭವಿಸಿ ಇಡೀ ಸೆಟ್ ಸುಟ್ಟು ಕರಕಲಾಗಿ ಹೋಗಿದೆ. 

ನೆಲಮಂಗಲ ಬಳಿ ಇರೋ ಮೋಹನ್ ಬಿ ಕೆರೆ ಸ್ಟುಡಿಯೋದಲ್ಲಿ ಹಾಕಲಾಗಿದ್ದ ಸೆಟ್ ಸಂಪೂರ್ಣ ಸುಟ್ಟು ಭಸ್ಮವಾಗಿದೆ. ಸುಟ್ಟು ಹೋಗಿರುವುದು ಸುಮಾರು 1 ಕೋಟಿ ಬೆಲೆ ಬಾಳುವ ಸೆಟ್. 3 ಕಂಟಕಗಳಲ್ಲೂ ಯಾರಿಗೂ ಪ್ರಾಣಾಪಾಯವಾಗಿಲ್ಲ. 

 

ಮೊದಲನೇ ಅನಾಹುತದ ನಂತರ ಮುನ್ನೆಚ್ಚರಿಕೆ ತೆಗೆದುಕೊಂಡಿದ್ದೆವು. ಇದರಿಂದಾಗಿ ಯಾವುದೇ ಅನಾಹುತ ಸಂಭವಿಸಿಲ್ಲ ಎಂದಿದ್ದಾರೆ ನಿರ್ಮಾಪಕ ಜಯಣ್ಣ. 

Sagutha Doora Doora Movie Gallery

Popcorn Monkey Tiger Movie Gallery