` ದರ್ಶನ್ ಹುಟ್ಟುಹಬ್ಬಕ್ಕೆ ಹೋಗುತ್ತೀರಾ.. ಹಾಗಾದರೆ.. - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
darshan image
Darshan

ಫೆಬ್ರವರಿ 16ರಂದು ದರ್ಶನ್ ಹುಟ್ಟುಹಬ್ಬ. ದರ್ಶನ್ ಹುಟ್ಟಹಬ್ಬವನ್ನು ಅಕ್ಷರಶಃ ಹಬ್ಬದಂತೆ ಆಚರಿಸೋದು ಅಭಿಮಾನಿಗಳು ಹಾಕಿಕೊಂಡು ಬಂದಿರೋ ಸಂಪ್ರದಾಯ. ಕಳೆದ ವರ್ಷ ಅಂಬರೀಷ್ ನಿಧನದ ಹಿನ್ನೆಲೆಯಲ್ಲಿ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿದ್ದ ದರ್ಶನ್, ಅಭಿಮಾನಿಗಳಿಂದ ದಿನಸಿ ಸಂಗ್ರಹಿಸಿ ಸಿದ್ದಗಂಗಾ ಮಠಕ್ಕೆ ಹಾಗೂ ಕೆಲವು ಅನಾಥಾಶ್ರಮ, ವೃದ್ಧಾಶ್ರಮಗಳಿಗೆ ತಲುಪಿಸಿದ್ದರು. ಈ ಬಾರಿಯೂ ದರ್ಶನ್ ಅಂತಹುದೇ ಕೆಲಸಕ್ಕೆ ಕೈ ಹಾಕಿದ್ದಾರೆ. ದರ್ಶನ್ ತಮ್ಮ ಅಭಿಮಾನಿಗಳಿಗೆ `ಹುಟ್ಟುಹಬ್ಬದ ಹೆಸರಲ್ಲಿ ಕೇಕ್, ಹೂವಿನ ಹಾರ ತಂದು ದುಡ್ಡು ವೇಸ್ಟ್ ಮಾಡಬೇಡಿ. ಅದೇ ದುಡ್ಡಲ್ಲಿ ಧವಸ ಧಾನ್ಯ ತಂದರೆ, ಅವುಗಳನ್ನು ಅನಾಥಾಶ್ರಮಗಳಿಗೆ ತಲುಪಿಸುವೆ' ಎಂದು ಮನವಿ ಮಾಡಿದ್ದಾರೆ.

ಅಷ್ಟೇ ಅಲ್ಲ, ಅಭಿಮಾನಿಗಳು ತಮ್ಮ ಮನೆಯ ಬಳಿ ಅನುಚಿತವಾಗಿ ವರ್ತಿಸಬಾರದು. ಅಕ್ಕಪಕ್ಕದ ಮನೆಯವರಿಗೆ ತೊಂದರೆ ಕೊಡಬಾರದು. ಪಟಾಕಿ ಹೊಡೆಯುವುದು, ಕಾಂಪೌಂಡ್ ಹತ್ತುವುದು, ಹೂಕುಂಡ ಒಡೆಯುವ ವರ್ತನೆ ಬೇಡ. ಪೊಲೀಸರ ಜೊತೆ ಸಹಕರಿಸಬೇಕು. ನನ್ನ ಮೇಲೆ ಇಷ್ಟೆಲ್ಲ ಪ್ರೀತಿ ಇರುವ ನೀವು, ನನ್ನ ಈ ಮನವಿಯನ್ನು ಗೌರವಿಸಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.

Sagutha Doora Doora Movie Gallery

Popcorn Monkey Tiger Movie Gallery