ಖಾಕಿ ಅನ್ನೋ ಸಿನಿಮಾದಲ್ಲಿ ಭ್ರಷ್ಟಾಚಾರದ ವಿರುದ್ಧ ಹೋರಾಟವೇ ಪ್ರಮುಖ ಕಥೆ ಅನ್ನೋದು ಸತ್ಯ. ಆದರೆ ಈ ಹೋರಾಟದ ಕಥೆಯಲ್ಲಿ ಒಂದು ಪ್ರೇಮಕಥೆಯೂ ಇದೆ. ಈಗಾಗಲೇ ತಾನ್ಯಾ ಹೋಪ್, ತನ್ನದು ಸ್ಟ್ರಾಂಗ್ ಹುಡುಗಿ ಪಾತ್ರ ಎಂದಿದ್ದಾರೆ. ಈ ಸ್ಟ್ರಾಂಗ್ ಹುಡುಗಿಯ ಬೆನ್ನು ಹತ್ತುವ ಚಿರು, ಆಕೆಗಾಗಿ ಹಾಡೋ ಹಾಡಿದು.
ಪ್ರತ್ರಿಯೊಬ್ಬ ಹುಡುಗನ ಹಿಂದೆ ಹುಡುಗಿ ಇರ್ತಾಳಂತೆ..ಅವರಿಂದ ಹುಡುಗರ ಜೀವ್ನ ಚೆನ್ನಾಗಿರ್ತಾದಂತೆ.. ಯೋಗರಾಜ್ ಭಟ್ಟರ ಪೆನ್ನಿನಲ್ಲಿ ಅರಳಿರುವ ಈ ಗೀತೆ ಯುವಕರ ಪ್ರೇಮ ನಿವೇದನೆಯ ಗೀತೆಯಾಗಿದೆ. ಋತ್ವಿಕ್ ಮುರಳೀಧರ್ ಸಂಗೀತದಲ್ಲಿ ಸೃಷ್ಟಿಯಾಗಿರುವ ಹಾಡಿಗೆ, ನವೀನ್ ಸಜ್ಜು ತಮ್ಮ ತರಲೆ ಸ್ಟೈಲಲ್ಲಿಯೇ ಹಾಡಿದ್ದಾರೆ.
ಭಟ್ಟರ ಶೈಲಿಯ ಉಡಾಫೆ ಮತ್ತೊಂದಿಷ್ಟು ಆಧ್ಯಾತ್ಮವೂ ಇರೋ ಗೀತೆಯಲ್ಲಿ ಚಿರು ಮತ್ತು ತಾನ್ಯಾ ಹೋಪ್ ರೊಮ್ಯಾಂಟಿಕ್ ಆಗಿ ಹೆಜ್ಜೆ ಹಾಕಿದ್ದಾರೆ. ನವೀನ್ ರೆಡ್ಡಿ ನಿರ್ದೇಶನದ ಚಿತ್ರಕ್ಕೆ ತರುಣ್ ಶಿವಪ್ಪ ನಿರ್ಮಾಪಕ. ಶಿವಮಣಿ ವಿಲನ್ ಆಗಿರೋ ಚಿತ್ರದಲ್ಲಿ ಛಾಯಾಸಿಂಗ್ ಪೊಲೀಸ್ ಆಫೀಸರ್ ಆಗಿ ನಟಿಸಿದ್ದಾರೆ. ಚಿತ್ರ ಜನವರಿ 24ರಂದು ರಿಲೀಸ್ ಆಗುತ್ತಿದೆ.