ಕನ್ನಡದ ಮಧುರ ಪ್ರೇಮಗೀತೆಗಳಿಗೆ ಹೊಸದೊಂದು ಸ್ಪರ್ಶ ಕೊಟ್ಟವರು ಜಯಂತ್ ಕಾಯ್ಕಿಣಿ. ಈಗ ಅವರ ಪುತ್ರ ಋತ್ವಿಕ್ ಕೂಡಾ ಚಿತ್ರಸಾಹಿತಿಯಾಗಿದ್ದಾರೆ. ನಟನ ಮಗ ನಟನಾಗುವುದು, ನಿರ್ದೇಶಕರ ಮಕ್ಕಳು ನಿರ್ದೇಶಕರಾಗುವುದು, ರಾಜಕಾರಣಿಯ ಮಕ್ಕಳು ರಾಜಕಾರಣಿಯೇ ಆಗುವುದು, ಡಾಕ್ಟರ್ ಮಗ ಡಾಕ್ಟರ್, ಟೀಚರ್ ಮಗ ಟೀಚರ್ ಆಗುವುದು ಅಪರೂಪವೇನಲ್ಲ. ಆದರೆ, ಸಾಹಿತಿಯ ಮಗ ಸಾಹಿತಿಯಾಗುವುದು ಅಪರೂಪದಲ್ಲಿ ಅಪರೂಪ. ಆ ವಿಶಿಷ್ಟ ಸಾಧನೆ ಬರೆದಿರೋ ಋತ್ವಿಕ್ ಬರೆದಿರೋ ಹಾಡು ಮಾದೇಶ..
ಪಾಪ್ ಕಾರ್ನ್ ಮಂಕಿ ಟೈಗರ್ ಚಿತ್ರಕ್ಕೆ ಋತ್ವಿಕ್ ಕಾಯ್ಕಿಣಿ ಬರೆದಿರುವ ಮಾದೇಶ ಹಾಡು ಮೋಡಿ ಮಾಡಿಬಿಟ್ಟಿದೆ. ಸೂರಿ ನಿರ್ದೇಶನ, ಚರಣ್ ರಾಜ್ ಸಂಗೀತ, ಸಂಚಿತ್ ಹೆಗ್ಡೆ ಧ್ವನಿಯಲ್ಲಿಮೆರಗು ಹೆಚ್ಚಿಸಿಕೊಂಡಿದೆ.
ಅಂದಹಾಗೆ ಋತ್ವಿಕ್ ಕಾಯ್ಕಿಣಿ, ಅಮೆರಿಕದಲ್ಲಿ ಓದಿದವರು. ಆಟ್ರ್ಸ್ & ಟೆಕ್ನಾಲಜಿ ಪದವೀಧರ. ಸೌಂಡ್ ಎಂಜಿನಿಯರಿಂಗ್ ಕ್ಷೇತ್ರದಲ್ಲಿ ಎಕ್ಸ್‍ಪರ್ಟ್. ಈಗ ಚಿತ್ರರಂಗಕ್ಕೆ ಬಂದಿದ್ದಾರೆ. ಋತ್ವಿಕ್ ರಾಜ್ ಮತ್ತು ಹನುಮಾನ್ ಬರೆದ ಹಾಡು ಈಗ ಚಿತ್ರಕ್ಕೆ ಹೊಸ ರೂಪ ಕೊಟ್ಟಿದೆ.
ಇದು ಪ್ಲಾನ್ ಪ್ರಕಾರ ಆಗಿದ್ದಲ್ಲ. ನಮಗೆ ಚಿತ್ರದಲ್ಲಿ ಹಾಡು ಹಾಕುವ ಯೋಚನೆಯೇ ಇರಲಿಲ್ಲ. ಆದರೆ, ಈ ಹುಡುಗರು ಚಿತ್ರದ ಶೂಟಿಂಗ್ ಮತ್ತು ದೃಶ್ಯಗಳನ್ನು ನೋಡಿಕೊಂಡು ಹಾಡು ಕೊಟ್ಟಿದ್ದಾರೆ. ಹೀಗಾಗಿಯೇ ಇದು ಸ್ಪೆಷಲ್ ಎಂದಿದ್ದಾರೆ ಸೂರಿ.