` ಟೈಟಲ್ ಥರ್ಡ್ ಕ್ಲಾಸ್.. ಸಿನಿಮಾ ಫಸ್ಟ್ ಕ್ಲಾಸ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
third class movie title speciality
Third Class Movie Image

ಥರ್ಡ್ ಕ್ಲಾಸ್ ಅನ್ನೋದು ಬೈಗುಳದ ಪದವಾಗಿ, ಲೋ ಸ್ಟಾಂಡರ್ಡಿಗೆ ಬಳಸುವ ಪದವಾಗಿ ಬಳಕೆಯಲ್ಲಿದೆ. ಅಂತಾದ್ದೊಂದು ಪದವನ್ನು ಚಿತ್ರದ ಟೈಟಲ್ ಆಗಿಟ್ಟುಕೊಂಡು ಫಸ್ಟ್ ಕ್ಲಾಸ್ ಸಿನಿಮಾ ಹೊರತಂದಿದ್ದಾರೆ ಜಗದೀಶ್. ಥರ್ಡ್ ಕ್ಲಾಸ್ ಚಿತ್ರಕ್ಕೆ ಜಗದೀಶ್ ಹೀರೋ, ಕಥೆಗಾರ ಮತ್ತು ನಿರ್ಮಾಪಕ.

ಚಿತ್ರದಲ್ಲಿ ಇಬ್ಬರು ನಾಯಕಿಯರು. ರೂಪಿಕಾ ಮತ್ತು ದಿವ್ಯಾರಾವ್. ಅವಿನಾಶ್, ಸಂಗೀತಾ, ರಮೇಶ್ಭಟ್, ಪವನ್ ಕೂಡಾ ನಟಿಸಿರುವ ಚಿತ್ರದಲ್ಲಿ ಜೆಡಿಎಸ್ ಶಾಸಕ ಸರವಣ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವುದು ವಿಶೇಷ.

ಅಶೋಕ್‌ ದೇವ್‌  ಈ ಚಿತ್ರದ ನಿರ್ದೇಶಕ. ಚಿತ್ರದಲ್ಲಿ ಸಮಾಜದಲ್ಲಿರುವ ಶ್ರೀಮಂತ-ಬಡವ ಎಂಬ ವರ್ಗ, ಸ್ಥಾನಮಾನಗಳ ಸುತ್ತ ಕಥೆಯಿದೆ, ಚಿತ್ರದ ಕಥೆಗೆ ಈ ಟೈಟಲ್ ಸೂಕ್ತವಾಗಿದೆ ಎನ್ನುತ್ತಾರೆ ಅಶೋಕ್ ದೇವ್. ಚಿತ್ರದ ಟ್ಯಾಗ್ಲೈನ್ ಹಣೆಬರಹಕ್ಕೆ ಯಾರು ಹೊಣೆ..?

Shivarjun Movie Gallery

KFCC 75Years Celebrations and Logo Launch Gallery