ಪೌರಾಣಿಕ ಪಾತ್ರಗಳೆಂದರೆ ಕಲಾವಿದರು, ತಂತ್ರಜ್ಞರು ಕೆಲವು ವ್ರತಗಳನ್ನು ತಪ್ಪದೇ ಪಾಲಿಸುತ್ತಾರೆ. ಅದರಲ್ಲೂ ದೇವರ ಪಾತ್ರ ಮಾಡಿದರೆ, ಮಾಡುತ್ತಿದ್ದರೆ, ಆ ಪಾತ್ರದ ಚಿತ್ರೀಕರಣದ ವೇಳೆ ಮಾಂಸಾಹಾರ, ಮದ್ಯಪಾನ ಸೇರಿದಂತೆ ಯಾವುದೇ ತಪ್ಪು ಮಾಡದಂತೆ ಎಚ್ಚರವಹಿಸುತ್ತಾರೆ. ಅದು ಬಹಳ ಹಿಂದಿನಿಂದಲೂ ನಡೆದುಕೊಂಡು ಬಂದ ಸಂಪ್ರದಾಯವೇ ಆಗಿ ಹೋಗಿದೆ. ದರ್ಶನ್ ಕೂಡಾ ಅದಕ್ಕೆ ಹೊರತಲ್ಲ.
ರಾಬರ್ಟ್ ಚಿತ್ರದಲ್ಲಿ ದರ್ಶನ್ ಆಂಜನೇಯನ ವೇಷದಲ್ಲಿ ಕಾಣಿಸಿಕೊಂಡಿದ್ದಾರೆ. ಆಂಜನೇಯನ ಪಾತ್ರದಲ್ಲಿ ಕಾಣಿಸಿಕೊಂಡ ಕಾರಣಕ್ಕೆ ದರ್ಶನ್ ಮದ್ಯ, ಮಾಂಸಾಹಾರಗಳಿಂದ ದೂರ ಉಳಿದಿದ್ದರಂತೆ. ಸುಮಾರು 8 ದಿನಗಳ ಶೂಟಿಂಗ್ ಮುಗಿಯುವವರೆಗೆ ವ್ರತಧಾರಿಯಾಗಿ ಶಿಸ್ತುಬದ್ಧರಾಗಿದ್ದರಂತೆ ದರ್ಶನ್. ದರ್ಶನ್ ಒಬ್ಬರೇ ಅಲ್ಲ, ಆ ಚಿತ್ರೀಕರಣ ನಡೆಯುತ್ತಿದ್ದ ಅಷ್ಟೂ ದಿನ ಸೆಟ್‍ನಲ್ಲಿದ್ದವರೆಲ್ಲ ಇದೇ ವ್ರತ ಪಾಲಿಸಿದರಂತೆ.
ತರುಣ್ ಸುಧೀರ್ ನಿರ್ದೇಶನದ ಚಿತ್ರದಲ್ಲಿ ದರ್ಶನ್ ಆಂಜನೇಯನ ವೇಷ ಹಾಕೋದೇಕೆ, ರಾಬರ್ಟ್ ಅನ್ನೋ ಕ್ರಿಶ್ಚಿಯನ್ ಹೆಸರು ಟೈಟಲ್ ಆಗಿರೋವಾಗ ಆಂಜನೇಯ ಎಲ್ಲಿಂದ ಬರ್ತಾನೆ ಅನ್ನೋ ಕುತೂಹಲ ಸಹಜವಾಗಿಯೇ ಹುಟ್ಟಿದೆ. ಉಮಾಪತಿ ನಿರ್ಮಾಣದ ಚಿತ್ರ, ಬೇಸಗೆ ರಜೆಯಲ್ಲಿ ರಿಲೀಸ್ ಆಗುವ ಸಾಧ್ಯತೆ ಇದೆ.