ಕನ್ನಡ ಚಿತ್ರ ರಸಿಕರ ಪಾಲಿಗೆ ಬಸಣ್ಣಿಯಾಗಿಯೇ ಗುರುತಿಸಿಕೊಂಡ ತಾನ್ಯಾ ಹೋಪ್, ಅಮರ್ ಚಿತ್ರದಲ್ಲಿ ನಾಯಕಿಯಾಗಿ ಗಮನ ಸೆಳೆದರು. ಈಗ ಚಿರಂಜೀವಿ ಸರ್ಜಾ ಎದುರು ಹೀರೋಯಿನ್ ಆಗಿ ಖಾಕಿ ತೊಟ್ಟಿದ್ದಾರೆ.
ನನಗೆ ಖಾಕಿ ಮೇಲೆ ತುಂಬಾನೇ ನಿರೀಕ್ಷೆ ಇದೆ. ನಾನಂತೂ ಪ್ರೇಕ್ಷಕರ ರಿಯಾಕ್ಷನ್ ಹೇಗಿರುತ್ತೆ ಎಂದು ತಿಳಿದುಕೊಳ್ಳೋಕೆ ಎಕ್ಸೈಟ್ ಆಗಿದ್ದೇನೆ. ಇಷ್ಟಪಟ್ಟು, ಕಷ್ಟಪಟ್ಟು ಮಾಡಿರುವ ಚಿತ್ರವಿದು ಅಂತಾರೆ ತಾನ್ಯಾ ಹೋಪ್.
ಒಂದೊಳ್ಳೆ ಅವಕಾಶ ಕೊಟ್ಟ ನಿರ್ಮಾಪಕ ತರುಣ್ ಶಿವಪ್ಪ ಮತ್ತು ನಿರ್ದೇಶಕ ನವೀನ್ ರೆಡ್ಡಿಗೆ ಥ್ಯಾಂಕ್ಸ್ ಹೇಳೋದನ್ನು ಮರೆಯೋದಿಲ್ಲ. ಅದನ್ನು ಸರಿಯಾಗಿ ಬಳಸಿಕೊಂಡಿದ್ದೇನೆ. ಭ್ರಷ್ಟಾಚಾರದ ವಿರುದ್ಧ ಹೋರಾಡುವ ನಾಯಕನಿಗೆ ಬೆನ್ನೆಲುಬಾಗಿ ನಿಲ್ಲುವ ಸ್ಟ್ರಾಂಗ್ ಹುಡುಗಿಯ ಪಾತ್ರ ನನ್ನದು ಎನ್ನುವ ತಾನ್ಯಾ ಹೋಪ್, ಈ ಚಿತ್ರದಲ್ಲಿ 100% ಎಂಟರ್ಟೈನ್ಮೆಂಟ್ ಪಕ್ಕಾ ಅನ್ನೊ ಭರವಸೆ ಕೊಡ್ತಾರೆ.
ಸಿನಿಮಾ ಮುಂದಿನ ವಾರ ರಿಲೀಸ್ ಆಗುತ್ತಿದ್ದು, ಚಿತ್ರದಲ್ಲಿ ಛಾಯಾಸಿಂಗ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಖ್ಯಾತ ನಿರ್ದೇಶಕ ಶಿವಮಣಿ ಚಿತ್ರದಲ್ಲಿ ವಿಲನ್.