ಶ್ರವಣಬೆಳಗೊಳದ ಬಾಹುಬಲಿ ವಿಗ್ರಹದ ಕಥೆ ಗೊತ್ತಲ್ಲ, ಅದನ್ನು ಕಟ್ಟಿಸಿದ್ದು ಚಾವುಂಡರಾಯ. ಅದು ಭರತನ ತಮ್ಮ ಬಾಹುಬಲಿಯ ವಿಗ್ರಹ. ಜೈನ ಧರ್ಮ ಉಚ್ರಾಯ ಸ್ಥಿತಿಯಲ್ಲಿದ್ದ ಕಾಲದಲ್ಲಿ ಚಕ್ರವರ್ತಿ ಚಂದ್ರಗುಪ್ತ ಮೌರ್ಯ ಎಲ್ಲವನ್ನೂ ತ್ಯಜಿಸಿ ಶ್ರವಣಬೆಳಗೊಳಕ್ಕೆ ಬಂದು ಸನ್ಯಾಸಿಯಾಗಿರುತ್ತಾನೆ.. ಇವೆಲ್ಲ ಕಥೆ ಇತಿಹಾಸ ಓದಿದವರಿಗೆ ಗೊತ್ತಿರುವಂಥದ್ದೇ. ಆದರೆ, ಭರತ ಬಾಹುಬಲಿಯಲ್ಲಿ ಇನ್ನೂ ಒಂದು ಕಥೆಯಿದೆ.
ಶ್ರವಣಬೆಳಗೊಳಕ್ಕೆ ಬಾಹುಬಲಿ ವಿಗ್ರಹ ಬಂದಿದ್ದು ಹೇಗೆ ಅನ್ನೋ ಕಥೆ ಹೇಳಿದ್ದಾರೆ ಮಂಜು ಮಾಂಡವ್ಯ. ಇಡೀ ಚಿತ್ರವನ್ನು ಥಿಯೇಟರಿನಲ್ಲಿ ಆರಂಭದಿಂದಲೇ ನೋಡಿ. ಇಲ್ಲದೇ ಹೋದರೆ ಲಿಂಕ್ ಮಿಸ್ ಆಗುತ್ತೆ. ಹೊಸ ಸ್ಟೈಲ್‍ನಲ್ಲಿ ಚಿತ್ರಕಥೆ ಹೇಳಲಾಗಿದೆ ಎನ್ನುವ ಮಂಜು ಮಾಂಡವ್ಯಗೆ, ಚಿತ್ರವನ್ನು ಜನ ಸ್ವೀಕರಿಸಿದ ಬಗ್ಗೆ ಖುಷಿಯಿದೆ.
ಶಿವಪ್ರಕಾಶ್ ನಿರ್ಮಾಣದ ಚಿತ್ರದಲ್ಲಿ ಮಂಜು ಮಾಂಡವ್ಯ ಜೊತೆ ಚಿಕ್ಕಣ್ಣ, ಶ್ರೀನಿವಾಸ ಮೂರ್ತಿ ನಟಿಸಿದ್ದಾರೆ