` ಮಧ್ಯರಾತ್ರಿ ರಿಲೀಸ್ ಆಗಲಿದೆ ಸಲಗ ಟೀಸರ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
salaga second teaser on jan 19th mid night
Salaga

ದುನಿಯಾ ವಿಜಯ್ ಇದೇ ಮೊದಲ ಬಾರಿಗೆ ನಿರ್ದೇಶಿಸಿರುವ ಚಿತ್ರ ಸಲಗ. ಟಗರು ನಂತರ ಕೆ.ಪಿ.ಶ್ರೀಕಾಂತ್ ನಿರ್ಮಿಸಿರುವ ಚಿತ್ರ ಸಲಗ. ಟಗರು ಚಿತ್ರದ ತಂತ್ರಜ್ಞರೇ ಬಹುತೇಕ ಕೂಡಿಕೊಂಡು ರೂಪಿಸಿರುವ ಚಿತ್ರ ಸಲಗ. ದುನಿಯಾ ವಿಜಯ್, ಧನಂಜಯ್ ಒಟ್ಟಿಗೇ ನಟಿಸಿರುವ ಚಿತ್ರ ಸಲಗ. ಈಗ ಆ ಚಿತ್ರದ ಟೀಸರ್ ರಿಲೀಸ್ ಸಮಯ. ಅದು ನಡೆಯುವುದು ಜನವರಿ 19ರ ಮಧ್ಯರಾತ್ರಿ.

ಹೌದು, ಜನವರಿ 20 ದುನಿಯಾ ವಿಜಯ್ ಬರ್ತ್ ಡೇ. ಹೀಗಾಗಿ ಜನವರಿ 19ರ ಮಧ್ಯರಾತ್ರಿ ತಮ್ಮ ಮನೆಯೆದುರೇ ಅಭಿಮಾನಿಗಳ ಸಮ್ಮುಖದಲ್ಲಿ ಟೀಸರ್ ರಿಲೀಸ್ ಮಾಡುತ್ತಿದ್ದಾರೆ ದುನಿಯಾ ವಿಜಿ. ಆ ಸಂಭ್ರಮಕ್ಕೆ ವಿಜಿಗೆ ಜೊತೆಯಾಗಲಿರುವುದು ರಿಯಲ್ ಸ್ಟಾರ್ ಉಪೇಂದ್ರ.

ಮಧ್ಯರಾತ್ರಿ ಟೀಸರ್ ಬಿಡುಗಡೆ ಕಾರ್ಯಕ್ರಮಕ್ಕೆ ಬರುವುದಾಗಿ ಉಪೇಂದ್ರ ಒಪ್ಪಿಕೊಂಡಿದ್ದೇ ನಮ್ಮ ಸಂಭ್ರಮ ಹೆಚ್ಚಿಸಿದೆ ಎನ್ನುತ್ತಾರೆ ವಿಜಿ. 

Sagutha Doora Doora Movie Gallery

Popcorn Monkey Tiger Movie Gallery