ಪುನೀತ್ ರಾಜ್ಕುಮಾರ್ ಅಭಿನಯದ ಜೇಮ್ಸ್ ಯಾವಾಗ ಶುರುವಾಗುತ್ತೆ ಎಂಬ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ. ನಿರೀಕ್ಷೆಯಂತೆಯೇ ಜನವರಿ 19ರಂದು ಚಿತ್ರದ ಮುಹೂರ್ತ ನಡೆಯುತ್ತಿದೆ. 4 ವರ್ಷಗಳ ಹಿಂದೆ ಘೋಷಣೆಯಾಗಿದ್ದ ಚಿತ್ರವಿದು. ಭರ್ಜರಿ ಚೇತನ್ ನಿರ್ದೇಶನದ ಚಿತ್ರಕ್ಕೆ ಈಗ ಕಾಲ ಕೂಡಿ ಬಂದಿದೆ.
ಜನವರಿ 19ರಂದು ದೇವಸಂದ್ರ ಲೇಔಟ್ನಲ್ಲಿರೋ ಶ್ರೀಬಾಲಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಮುಹೂರ್ತ ನಡೆಯಲಿದೆ. ಆದರೆ ಶೂಟಿಂಗ್ ಶುರುವಾಗುವುದೇನಿದ್ದರೂ ಫೆಬ್ರವರಿಯಲ್ಲಿ. ಅಷ್ಟು ಹೊತ್ತಿಗೆ ಯುವರತ್ನ ಶೂಟಿಂಗ್ ಮುಗಿದು, ಜೇಮ್ಸ್ ಲುಕ್ಗೆ ಪುನೀತ್ ಬದಲಾಗುತ್ತಾರೆ.
ಅಂದಹಾಗೆ ಜನವರಿ 19, ಚೇತನ್ ಪಾಲಿಗೆ ಲಕ್ಕಿ ಡೇ ಕೂಡಾ ಹೌದು. ಭರಾಟೆ ಚಿತ್ರ ಸೆಟ್ಟೇರಿದ್ದ ದಿನವದು.