ನೀನಾಸಂ ಸತೀಶ್, ಶ್ರದ್ಧಾ ಶ್ರೀನಾಥ್ ಒಟ್ಟಿಗೇ ನಟಿಸಿರುವ ಮೊದಲ ಸಿನಿಮಾ ಗೋದ್ರಾ. ಎಂದೂ ಮುಗಿಯದ ಯುದ್ಧ ಅನ್ನೋದು ಟ್ಯಾಗ್‍ಲೈನ್. ಬಹುಕಾಲದ ನಿರೀಕ್ಷಿತ ಚಿತ್ರವಿದು. ಕಾರಣ ನಂ.1 ಚಿತ್ರದ ಟೈಟಲ್. ಏಕೆಂದರೆ, ಗೋದ್ರಾ ಅನ್ನೋ ಹೆಸರಿನಲ್ಲಿ ಭಾರತದ ಕರಾಳ ಇತಿಹಾಸವೊಂದು ಶಾಶ್ವತವಾಗಿ ನಿಂತಿದೆ. ಅಂಥಾದ್ದೊಂದು ಟೈಟಲ್ ಇಟ್ಟುಕೊಂಡು ಬರುತ್ತಿರುವ ಸಿನಿಮಾ ಕಥೆ ಏನಿರಬಹುದು ಅನ್ನೋ ಕುತೂಹಲ ಸಹಜವಾಗಿಯೇ ಇರುತ್ತೆ. ಚಿತ್ರದ ಟೀಸರ್ ಆ ಕುತೂಹಲವನ್ನು ಇನ್ನಷ್ಟು ಹೆಚ್ಚಿಸಿದೆ.
ಅಲ್ಲಿ ರಾಜಕೀಯ, ಲವ್ ಸ್ಟೋರಿ, ನಕ್ಸಲ್ ಚಳವಳಿ, ಎಂಎನ್‍ಸಿಗಳ ವಿರುದ್ಧ ಹೋರಾಟ, ಹಿಂದುತ್ವದ ಕಿಚ್ಚು ಎಲ್ಲವೂ ಕಾಣಿಸುವ ಟೀಸರ್, ಕಥೆಯ ಒನ್ ಲೈನ್ ಗುಟ್ಟು ಬಿಟ್ಟುಕೊಟ್ಟಿಲ್ಲ.
ಟೀಸರ್‍ನಲ್ಲಿ ಬರೋ ಖಡಕ್ ಡೈಲಾಗುಗಳು ರೋಮಾಂಚನ ಹುಟ್ಟಿಸುತ್ತವೆ. ನಿರ್ದೇಶಕ ಕೆ.ಎಸ್.ನಂದೀಶ್ ಭರವಸೆ ಹುಟ್ಟಿಸುತ್ತಾರೆ. ಜೇಕೋಬ್ ಫಿಲಂಸ್, ಲೀಡರ್ ಫಿಲಂಸ್ ಬ್ಯಾನರಿನಲ್ಲಿ ಬರುತ್ತಿರೋ ಚಿತ್ರದಲ್ಲಿ ಸತೀಶ್, ಶ್ರದ್ಧಾ ಜೊತೆಗೆ ಅಚ್ಯುತ್ ಕುಮಾರ್, ವಸಿಷ್ಠ ಸಿಂಹ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.