ರಾಬರ್ಟ್ ರಾಮಾಯಣ ದರ್ಶನ್ ಅಭಿಮಾನಿಗಳು ಥ್ರಿಲ್ಲಾಗುವಂತೆ ಮಾಡಿದೆ. ದರ್ಶನ್ ಇದುವರೆಗೆ ಇಂತಹ ಗೆಟಪ್ಪಿನಲ್ಲಿ ಕಾಣಿಸಿಕೊಂಡೇ ಇರಲಿಲ್ಲ. ಇದೇ ಮೊದಲು.. ದರ್ಶನ್ ಅವರ ಆಂಜನೇಯನ ಗೆಟಪ್‍ನಲ್ಲಿ ಅಷ್ಟೇ ಕುತೂಹಲ ಸೃಷ್ಟಿಸಿ ಬೆರಗು ಹುಟ್ಟಿಸಿರುವುದು ದರ್ಶನ್ ಹೆಗಲ ಮೇಲಿರೋ ರಾಮ ಅರ್ಥಾತ್ ಬಾಲರಾಮ.
ಈ ಬಾಲರಾಮನ ಪಾತ್ರದಲ್ಲಿ ಕಾಣಿಸಿಕೊಂಡಿರೋ ಹುಡುಗನ ಹೆಸರು ಜೇಸನ್. ಬಾಂಬೆಯ ಹುಡುಗ. ಅಕ್ಷಯ್ ಕುಮಾರ್, ಶಾರೂಕ್ ಅಭಿನಯದ ಚಿತ್ರಗಳಲ್ಲಿ ನಟಿಸಿರುವ ಬಾಲ ಕಲಾವಿದ. 10 ವರ್ಷದ ಈ ಹುಡುಗ ಕೆಲವು ಜಾಹೀರಾತುಗಳಲ್ಲೂ ನಟಿಸಿದ್ದಾನೆ.
ತರುಣ್ ಸುಧೀರ್ ನಿರ್ದೇಶನದ ಚಿತ್ರದಲ್ಲಿ ದರ್ಶನ್ 3 ಶೇಡ್‍ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಆಶಾ ಭಟ್ ನಾಯಕಿ. ವಿನೋದ್ ಪ್ರಭಾಕರ್, ಸೋನಲ್ ಮಂಥೆರೋ ಕೂಡಾ ಪ್ರಮುಖ ಪಾತ್ರಗಳಲ್ಲಿದ್ದು, ಜಗಪತಿ ಬಾಬು ಖಳನಾಯಕ. ಉಮಾಪತಿ ನಿರ್ಮಾಣದ ಚಿತ್ರ, ಬೇಸಗೆ ರಜೆಗೆ ಬರುವ ಸಾಧ್ಯತೆ ಇದೆ.