` ಒಂಬತ್ತನೇ ದಿಕ್ಕು ಟೀಸರ್‍ಗೆ ಚಾಲೆಂಜಿಂಗ್ ಸ್ಟಾರ್ ಕಿಕ್ಕು - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
Ombattane dikku image
Yogi, Darshan, Dayal Padmanabhan

ದಯಾಳ್ ಪದ್ಮನಾಭನ್ ನಿರ್ದೇಶನದ ಹೊಸ ಚಿತ್ರ ಒಂಬತ್ತನೇ ದಿಕ್ಕು. ವಿಭಿನ್ನ ಪ್ರಯೋಗಾತ್ಮಕ ಚಿತ್ರಗಳ ಮೂಲಕವೇ ಗಮನ ಸೆಳೆಯುತ್ತಿರುವ ದಯಾಳ್, ಒಂಬತ್ತನೇ ದಿಕ್ಕಿನಲ್ಲಿ ಮತ್ತೊಂದು ಕಮರ್ಷಿಯಲ್ ಪ್ರಯೋಗಕ್ಕೆ ಕೈ ಹಾಕಿದ್ದಾರೆ.

ಲೂಸ್ ಮಾದ ಯೋಗಿ, ಆದಿತಿ ಪ್ರಭುದೇವ, ರಮೇಶ್ ಭಟ್, ಸಾಯಿಕುಮಾರ್ ನಟಿಸಿರುವ ಚಿತ್ರದ ಟೀಸರ್, ಚಿತ್ರದ ಕಥೆಯ ಬಗ್ಗೆ ಯಾವುದೇ ಗುಟ್ಟು ಬಿಟ್ಟುಕೊಟ್ಟಿಲ್ಲ. ಎರಡು ನಿಗೂಢ ಕಥೆ ಒಂದು ಹಂತದಲ್ಲಿ ಮುಖಾಮುಖಿಯಾಗುತ್ತವೆ ಎಂಬ ಸುಳಿವನ್ನಷ್ಟೇ ಕೊಟ್ಟಿದ್ದಾರೆ ದಯಾಳ್.

ಇಡೀ ಟೀಸರ್‍ನ ಕಿಕ್ಕು ಹೆಚ್ಚಿಸಿರುವುದು ದರ್ಶನ್ ಧ್ವನಿ. ಹಿನ್ನೆಲೆಯಲ್ಲಿ ಬರುವ ದರ್ಶನ್ ವಾಯ್ಸ್ ವ್ಹಾವ್ ಎನ್ನುವಂತಿದೆ. ಚಿತ್ರ ಶೀಘ್ರದಲ್ಲೇ ಬಿಡುಗಡೆಯಾಗಲಿದೆ.

Sagutha Doora Doora Movie Gallery

Popcorn Monkey Tiger Movie Gallery