` ರಾಜ್ಯದಲ್ಲಿ ಶುರುವಾಯ್ತು ಸನ್ನಿ ಲಿಯೋನ್ ಅಭಿಮಾನಿಗಳ ಸಂಘ - chitraloka.com | Kannada Movie News, Reviews | Image

User Rating: 4 / 5

Star activeStar activeStar activeStar activeStar inactive
 
Sunny Leon fans association image
Sunny Leon fans association

ಮಾಜಿ ಪೋರ್ನ್ ಸ್ಟಾರ್, ಹಾಲಿ ಬಾಲಿವುಡ್ ನಟಿ ಸನ್ನಿಲಿಯೋನ್ ಹೆಸರಲ್ಲಿ ಅಭಿಮಾನಿಗಳ ಸಂಘವೊಂದು ಶುರುವಾಗಿದೆ. ಅರೆ.. ಸನ್ನಿಲಿಯೋನ್ ಅಭಿಮಾನಿಗಳ ಸಂಘನಾ ಎಂದು ಅಚ್ಚರಿ ಪಡಬೇಡಿ, ನೀವು ಓದುತ್ತಿರುವುದು ಖರೆ ಐತಿ. ಇಂಥಾದ್ದೊಂದು ಸಾಹಸ ಮಾಡಿರುವುದು ಕರ್ನಾಟಕದ ಜವಾರಿ ಹುಡುಗರು. ಜವಾರಿ ಅಂದ್ರೆ ಬೇರೇನಲ್ಲ, ಉತ್ತರ ಕರ್ನಾಟಕದ ಹುಡುಗರು.

ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನಲ್ಲಿ ಈ ಸಂಘ ರಚನೆಯಾಗಿದೆ. ಇತ್ತೀಚೆಗೆ ಇಲ್ಲಿ ನಡೆದ ಅಂಬಾದೇವಿ ಜಾತ್ರೆಯಲ್ಲಿ ಈ ಸಂಘ ಎಲ್ಲರ ಗಮನ ಸೆಳೆದಿದೆ. ಸುಮಾರು 15 ಯುವಕರು ಸೇರಿಕೊಂಡು ಈ ಸಂಘ ಸೃಷ್ಟಿಸಿದ್ದಾರೆ.

ಸನ್ನಿಲಿಯೋನ್ ಪ್ರಕೃತಿ ವಿಕೋಪ, ಅನಾಥ ಮಕ್ಕಳಿಗೆ ನೆರವು ನೀಡುವ ಮೂಲಕ ಔದಾರ್ಯ ಮೆರೆಯುತ್ತಿದ್ದಾರೆ. ಹೀಗಾಗಿ ನಾವು ಸನ್ನಿಲಿಯೋನ್ ಹೆಸರಲ್ಲಿ ಸನ್ನಿಲಿಯೋನ್ ಯುವಕ ಮಂಡಳಿ ಸ್ಥಾಪಿಸಿದ್ದೇವೆ. ಅವರ ನಟನೆಗಿಂತಲೂ ಅವರ ಹೃದಯ ವೈಶಾಲ್ಯತೆಯೇ ನಮಗೆ ಇಷ್ಟವಾಯ್ತು ಎಂದಿದ್ದಾರೆ ಸಂಘದ ಅಧ್ಯಕ್ಷ ಗೋಪಾಲ.

Sagutha Doora Doora Movie Gallery

Popcorn Monkey Tiger Movie Gallery