ಭರತ ಬಾಹುಬಲಿ ಚಿತ್ರ ಇದೇ ಜನವರಿ 17ಕ್ಕೆ ರಿಲೀಸ್ ಆಗುತ್ತಿದೆ. ಚಿತ್ರವನ್ನು ನೋಡಿದ 20 ಅದೃಷ್ಟವಂತರಿಗೆ 10 ಕಾರು, ಚಿನ್ನದ ಸರಗಳ ವಿಶೇಷ ಬಹುಮಾನಗಳನ್ನೂ ಘೋಷಿಸಿದೆ ಚಿತ್ರತಂಡ. ಅದಕ್ಕೆ ಕಾರಣವೂ ಇದೆ. ಭರತ ಬಾಹುಬಲಿ ರಿಲೀಸ್ ಡೇಟ್ ಅನೌನ್ಸ್ ಆದಾಗ ಯಾವುದೇ ಬೇರೆ ಚಿತ್ರ ಸ್ಪರ್ಧೆಯಲ್ಲಿರಲಿಲ್ಲ. ನಂತರ ಸಡನ್ ಆಗಿ ಹೊಸ ಚಿತ್ರಗಳು ರೇಸ್ಗೆ ಬಂದವು. ಹೀಗಾಗಿ ನಮ್ಮ ಚಿತ್ರಕ್ಕೆ ಪ್ರೇಕ್ಷಕರನ್ನು ಸೆಳೆಯಲು ಈ ಸ್ಕೀಮ್ ಬಿಟ್ಟೆವು. ಇದು ನಮ್ಮ ನಿರ್ಮಾಪಕರದ್ದೇ ಐಡಿಯಾ ಎನ್ನುತ್ತಾರೆ ನಟ, ನಿರ್ದೇಶಕ ಮಂಜು ಮಾಂಡವ್ಯ.
ಅಂದಹಾಗೆ ಇಡೀ ಸ್ಕೀಮ್ ಆರಂಭದ 14 ದಿನ ಮಾತ್ರ ಇರುತ್ತೆ. ನಿಮಗೆ 1 ಕೋಟಿಯ ಆಫರ್ ಬೇಕೆನಿಸಿದರೆ ಸಿನಿಮಾ ರಿಲೀಸ್ ಆದ 14 ದಿನಗಳ ಒಳಗೆ ನೋಡಬೇಕು. ಥಿಯೇಟರಿನವರು ಕೊಡುವ ಕೂಪನ್ ಇಟ್ಟುಕೊಳ್ಳಬೇಕು. 14 ದಿನಗಳ ನಂತರ ಚಿತ್ರತಂಡ ಲೈವ್ನಲ್ಲಿಯೇ ವಿಜೇತರನ್ನು ಆಯ್ಕೆ ಮಾಡುತ್ತದೆ.
ಶಿವಪ್ರಕಾಶ್ ನಿರ್ಮಾಣದ ಚಿತ್ರದಲ್ಲಿ ಮಂಜು ಮಾಂಡವ್ಯ ಮತ್ತು ಚಿಕ್ಕಣ್ಣ ಹೀರೋಗಳು.