ಚಾಲೆಂಜಿಂಗ್ ಸ್ಟಾರ್ ದರ್ಶನ್ ಇದೇ ಮೊದಲ ಬಾರಿಗೆ ಹನುಮನ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಕುರುಕ್ಷೇತ್ರದಲ್ಲಿ ಮಹಾಭಾರತದ ಕಿಚ್ಚು ಹೊತ್ತಿಸಿದ್ದ ದರ್ಶನ್, ರಾಬರ್ಟ್ ಚಿತ್ರದ ಈ ಒಂದು ಪೋಸ್ಟರ್ ಮೂಲಕ ರಾಮಾಯಣದ ಗುಂಗು ಹಿಡಿಸಿದ್ದಾರೆ.
ಮೂಲಗಳ ಪ್ರಕಾರ ಈ ಚಿತ್ರದಲ್ಲಿ ದರ್ಶನ್ 3 ಶೇಡ್‍ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅವುಗಳಲ್ಲಿ ಎರಡು ಶೇಡ್ ರಿವೀಲ್ ಆಗಿದೆ. ಒಂದು ರಾಬರ್ಟ್ ಪಾತ್ರ, ಮತ್ತೊಂದು ಸಂಜಯ್ ಪಾತ್ರ ರಿವೀಲ್ ಆಗಿವೆ. ಅಂದಹಾಗೆ ನಿರ್ದೇಶಕ ತರುಣ್ ಸುಧೀರ್ ಇದುವರೆಗೆ ಟೀಸರ್ ಕೊಟ್ಟಿಲ್ಲ. ಕೇವಲ ಪೋಸ್ಟರುಗಳಲ್ಲೇ ಆಟವಾಡುತ್ತಿದ್ದರೂ, ಚಿತ್ರದ ಬಗ್ಗೆ ಭಾರಿ ನಿರೀಕ್ಷೆ ಸೃಷ್ಟಿಸಿದ್ದಾರೆ.
ಉಮಾಪತಿ ನಿರ್ಮಾಣದ ಚಿತ್ರದಲ್ಲಿ ಆಶಾ ಭಟ್ ನಾಯಕಿಯಾಗಿದ್ದು, ವಿನೋದ್ ಪ್ರಭಾಕರ್, ಸೋನಲ್ ಮಂಥೆರೋ ಕೂಡಾ ಪ್ರಧಾನ ಪಾತ್ರಗಳಲ್ಲಿದ್ದಾasರೆ. ಡಬ್ಬಿಂಗ್ ಕೆಲಸದಲ್ಲಿ ನಿರತವಾಗಿರುವ ಚಿತ್ರ, ಏಪ್ರಿಲ್‍ನಲ್ಲಿ ತೆರೆಗೆ ಬರುವ ಸಾಧ್ಯತೆ ಇದೆ.