ಅವನೇ ಶ್ರೀಮನ್ನಾರಾಯಣ ಗೆದ್ದಾಗಿದೆ. ಅದೂ ಅಂತಿಂತಾ ಗೆಲುವಲ್ಲ, ಭರ್ಜರಿ..ಸೂಪರ್..ಬೊಂಬಾಟ್..ಮಾರ್ವಲೆಸ್..ಸೂಪರ್ಬ್..ಥಂಡರ್ಫುಲ್.. ಹೀಗೆಲ್ಲ ಹೇಳ್ತಾರಲ್ಲ.. ಅಂತಾ ಗೆಲುವು. ವರ್ಷದ ಕೊನೆಯಲ್ಲಿ ಬಂದು ಮತ್ತೊಮ್ಮೆ ಬಂಪರ್ ಬೆಳೆ ತೆಗೆದಿದ್ದಾರೆ ರಕ್ಷಿತ್ ಶೆಟ್ಟಿ. ಇಷ್ಟಕ್ಕೂ ಇಡೀ ಚಿತ್ರದ ಗೆಲುವಿನ ಅತಿ ದೊಡ್ಡ ಸೀಕ್ರೆಟ್ ಏನು..?
3 ವರ್ಷದ ಗ್ಯಾಪ್ ನಂತರ ರಕ್ಷಿತ್ ಶೆಟ್ಟಿ ಬಂದಿದ್ದಾ..? ಹಾಡು ಹಿಟ್ ಆಗಿದ್ದಾ..? ಸೆಟ್ಟುಗಳು ಅದ್ಭುತವಾಗಿದ್ದುದಾ..? ಅದ್ಭುತವಾಗಿ ಟೆಕ್ನಾಲಜಿಯನ್ನು ಬಳಸಿಕೊಂಡಿದ್ದಾ..? ರಕ್ಷಿತ್-ಶಾನ್ವಿ ಜೋಡಿ ವರ್ಕೌಟ್ ಆಯ್ತಾ..? ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಚಿತ್ರವನ್ನು ಪ್ರಮೋಟ್ ಮಾಡಿದ್ದು ಕೆಲಸ ಮಾಡಿತಾ..? ಹೀಗೆ ಹಲವು ಪ್ರಶ್ನೆಗಳು.. ಆದರೆ, ರಕ್ಷಿತ್ ಹೇಳಿದ ಗೆಲುವಿನ ರಹಸ್ಯಮಂತ್ರವೇ ಬೇರೆ.
ಸಿನಿಮಾ ಅಂತಾ ಬಂದಾಗ ನನ್ನ ಪ್ರಕಾರ ಬರವಣಿಗೆಯೇ ಕಿಂಗ್. ನನ್ನ ತಂಡ ಬರವಣಿಗೆಯನ್ನು ಒಂದು ರೂಪಕ್ಕೆ ತರುತ್ತೆ. ಅದೇ ತಂಡದ ಬೆನ್ನೆಲುಬು. ನಟನೆಯ ಮಾತು ಬಿಡಿ, ಪ್ರತಿ ಚಿತ್ರವೂ ನನಗೆ ಕಲಿಕೆಯೇ. ಇವೆಲ್ಲವೂ ಸೇರಿದರೆ ಮಾತ್ರ ರಕ್ಷಿತ್ ಶೆಟ್ಟಿ ಮತ್ತು ಅವನೇ ಶ್ರೀಮನ್ನಾರಾಯಣ ಎಂದಿದ್ದಾರೆ ರಕ್ಷಿತ್ ಶೆಟ್ಟಿ.
ಗೆಲುವಿನ ಸೀಕ್ರೆಟ್ ಅದೇ.. ಕಥೆ..